ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಿಂದ ಚಿಕ್ಕ ಮಕ್ಕಳ ಬೃಹತ್ ಆರೋಗ್ಯ ತಪಾಸಣಾ ಶಿಬಿರ

ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ( ಸಿಎಸ್ಆರ್) ಧಾರವಾಡದ ಖ್ಯಾತ ಮಕ್ಕಳ ತಜ್ಞರಾದ ರಾಜನ್ ದೇಶಪಾಂಡೆಯವರ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪೇಪರ್ ಮಿಲ್ ನ ಆಸ್ಪತ್ರೆಯಲ್ಲಿ ರವಿವಾರ ಆಯೋಜಿಸಿದ್ದ ಬೃಹತ್ ಪ್ರಮಾಣದ ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಶಿಬಿರದಲ್ಲಿ ಭಾಗವಹಿಸಿದ ವೈದ್ಯರು ಹಾಗೂ ಕಾಗದ ಕಂಪನಿಯ ಅಧಿಕಾರಿಗಳು

ಶಿಬಿರ ಉದ್ಘಾಟಿಸಿ ಮಾತನಾಡಿದ ಧಾರವಾಡದ ಹಿರಿಯ ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಯವರು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ಪ್ರತೀ ವರ್ಷ ಈ ಉಚಿತ ಮಕ್ಕಳ ಆರೋಗ್ಯ ಶಿಬಿರ ಆಯೋಜಿಸುತ್ತಿರುವುದು ನಿಜಕ್ಕೂ ದಾಖಲೆಯ ಕಾರ್ಯ. ಇಲ್ಲಿ ಪ್ರತೀ ವರ್ಷ ಸಾವಿರಾರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾಡಿನ ಪ್ರಸಿದ್ದ ಮಕ್ಕಳ ತಜ್ಞರು ಶಿಭಿರದಲ್ಲಿ ಭಾಗವಹಿಸುತ್ತಾರೆ. ಔಷಧಿಯನ್ನೂ ಉಚಿತವಾಗಿ ನೀಡಲಾಗುತ್ತದೆ. ಅಗತ್ಯವಿರುವ ಬಡ ಮಕ್ಕಳಿಗೆ ಧಾರವಾಡದ ನಮ್ಮ ವಿಠ್ಠಲ ಮಕ್ಕಳ ಆಸ್ಪತ್ರೆಯಲ್ಲಿಯೂ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಕಾಗದ ಕಂಪನಿಯ ಸೇವಾ ಕಾರ್ಯ ನಿಜಕ್ಕೂ ಜನಹಿತವಾದಂತದ್ದು ಎಂದರು.

ಕಾಗದ ಕಂಪನಿಯ ಕಾರ್ಯನಿರ್ವಾಹಹಕ ನಿರ್ದೇಶಕ ರಾಜೇಂದ್ರ ಜೈನ್ ಮಾತನಾಡಿ ನಾವು ಕಂಪನಿಯ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಅಡಿಯಲ್ಲಿ ಹಲವಾರು ಸೇವಾ ಕಾರ್ಯ ಮಾಡುತ್ತಿದ್ದೇವೆ. ಅವುಗಳಲ್ಲಿ ಈ ಆರೋಗ್ಯ ಶಿಬಿರ ಕೂಡಾ ಒಂದು. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಕ್ಕಳ ತಜ್ಞರಾದ ಡಾ. ರಾಜನ್ ದೇಶಪಾಂಡೆ, ಡಾ. ಕವನ ದೇಶಪಾಂಡೆ, ಡಾ. ವಿಶಾಲ ದುದಿಹಳ್ಳಿ, ಡಾ. ಎ.ಡಿ. ಶೇಖ್, ಡಾ. ರಾಘವೇಂದ್ರ ದೇಸಾಯಿ, ಡಾ. ಮಹೇಶ ಪಾಟೀಲ, ಡಾ. ಪ್ರೀತಿ ಪಾಂಡುರಂಗಿ ಸೇರಿದಂತೆ 15 ವೈದ್ಯರು ಚಿಕಿತ್ಸೆ ನೀಡಿದರು. ಹಾಗೂ ಕಂಪನಿ ಆಸ್ಪತ್ರೆಯ ವೈದ್ಯರಾದ ಡಾ. ಜ್ಞಾನದೀಪ ಗಾಂವಕರ , ಡಾ. ಪ್ರಿಯಾಂಕಾ ಸ್ಥಳೀಯ ವೈದ್ಯರಾದ ಡಾ. ಮುಕುಂದ ಕಾಮತ, ಡಾ. ಸದಾನಂದ ಕರ್ಕಿ, ಡಾ. ಶೇಖರ್ ಹಿರೇಮಠ ಮುಂತಾದವರಿದ್ದರು.

ಮಕ್ಕಳ ಹೃದ್ರೋಗ, ನರರೋಗ, ಕಿವಿ, ಕಣ್ಣು, ಮೂಗು, ಗಂಟಲು, ಹಲ್ಲು, ಮುಂತಾದ ವಿಭಾಗಗಳಲ್ಲಿ 15ಕ್ಕೂ ಹೆಚ್ಚು ನುರಿತ ವೈದ್ಯರು ತಪಾಸಣೆ ನಡೆಸಿದರು. ಗ್ರಾಮೀಣ ಭಾಗದ ಜನರಿಗೆ ಹೋಗಿ ಬರಲು ವಾಹನ ವ್ಯವಸ್ಥೆ ಮಾಡಿದ್ದರು.

ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕ ವಿಭಾಗದ ರಾಜೇಶ ತಿವಾರಿ ಸ್ವಾಗತಿಸಿ, ನಿರೂಪಿಸಿದರು. ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ ರಾಘವೇಂದ್ರ ಜೆ.ಆರ್. ಅಧಿಕಾರಿಗಳಾದ ಅಶೋಕ ಶರ್ಮಾ ವಿಜಯ ಮಹಾಂತೇಶ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಅನಿಲ ನಾಯ್ಕರ, ಕಂಪನಿಯ ಕೀರ್ತಿ ಗಾವಕರ, ರಾಜು ರೋಸಯ್ಯ, ಖಲೀಲ ಕುಲ್ಕರ್ಣಿ ಮುಂತಾದವರಿದ್ದರು.

ಶಿಭಿರದಲ್ಲಿ 600 ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತೆಂದು ಪಿ.ಆರ್.ಓ. ರಾಜೇಶ ತಿವಾರಿ ತಿಳಿಸಿದ್ದಾರೆ.

ಆರೋಗ್ಯ ಶಿಬಿರದ ವಿಡಿಯೋ ವೀಕ್ಷಿಸಿ….

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*