ಇಂದು ರಾತ್ರಿ ದಾಂಡೇಲಿಯಲ್ಲಿ ಯಕ್ಷಗಾನ : ‘ಮಾರುತಿ ಪ್ರತಾಪ’ , ‘ಶ್ರೀನಿವಾಸ ಕಲ್ಯಾಣ’

ದಾಂಡೇಲಿಯ ಹಳೆ ನಗರ ಸಭೆ ಮೈದಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಅಕ್ಟೋಬರ್ 8 ಮಂಗಳವಾರ ರಾತ್ರಿ 9 ಗಂಟೆಯಿಂದ ದಕ್ಷಿಣೋತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಮಾರುತಿ ಪ್ರತಾಪ’ ಹಾಗೂ ‘ಶ್ರೀನಿವಾಸ ಕಲ್ಯಾಣ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ಕಂಚಿನ ಕಂಠದ ಸುರೇಶ ಶೆಟ್ಟಿ, ಮದ್ದಲೆವಾದಕರಾಗಿ ಗಜಾನನ ಭಂಡಾರಿ, ಚಂಡೆಯಲ್ಲಿ ಗಣೇಶ್ ಗಾಂವಕರ ಇರಲಿದ್ದಾರೆ.

ಮುಮ್ಮೇಳದಲ್ಲಿ ಪ್ರಮುಖ ಪಾತ್ರದಲ್ಲಿ ಕೃಷ್ಣ ಯಾಜಿ, ಬಳ್ಕೂರ, ಅಶೋಕ ಭಟ್, ಸಿದ್ದಾಪುರ, ಗಣಪತಿ ನಾಯ್ಕ, ಕುಮಟಾ, ವಿಶ್ವನಾಥ್ ಆಚಾರ್ಯ, ತೊಂಬಟ್ಟು, ಪ್ರಕಾಶ ಮೊಗವೀರ, ಕಿರಾಡಿ, ದಿನೇಶ್ ಕಣ್ಣೂರು ಮುಂತಾದವರು ಅಮೋಘ ಅಭಿನಯ ನೀಡಲಿದ್ದಾರೆ.

ಸ್ತ್ರೀ ಪಾತ್ರದಲ್ಲಿ ನೀಲ್ಕೋಡು ಶಂಕರ ಹೆಗಡೆ, ವಿಜಯ ಗಾಣಿಗ, ಬೀಜಮಕ್ಕಿ, ಉಮೇಶ್ ಶಂಕರ ನಾರಾಯಣ ಅಭಿನಯಿಸಲಿದ್ದಾರೆ. ಹಾಸ್ಯ ಪಾತ್ರದಲ್ಲಿ ಶ್ರೀಧರ್ ಭಟ್, ಕಾಸರಗೋಡು ನಕ್ಕು ನಹಿಸಲಿದ್ದಾರೆ

ಅಪರೂಪದ ಕಲಾವಿದರ ಕೂಡುವಿಕೆಯಲ್ಲಿ ನಡೆಯುತ್ತಿರುವ ಯಕ್ಷಗಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನಾಸಕ್ತರು ಭಾಗವಹಿಸುವಂತೆ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಹೆಗಡೆ, ಅಧ್ಯಕ್ಷ ಟಿ.ಎಸ್. ಬಾಲಮಣಿ, ಕಾರ್ಯದರ್ಶಿ ನರೇಂದ್ರ ಚೌಹಾಣ್, ಖಜಾಂಚಿ ಅಶುತೋಶ್ ರಾಯ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎಸ್. ಪ್ರಕಾಶ್ ಶೆಟ್ಟಿ ಮನವಿ ಮಾಡಿದ್ದಾರೆ.

About ಬಿ.ಎನ್‌. ವಾಸರೆ 582 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*