ದಾಂಡೇಲಿ ನವರಾತ್ರಿ ಉತ್ಸವಕ್ಕೆ ಚಾಲನೆ : ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ

filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: Hdr; cct_value: 0; AI_Scene: (-1, -1); aec_lux: 268.20914; hist255: 0.0; hist252~255: 0.0; hist0~15: 0.0;

ದಾಂಡೇಲಿ : ಮೂರನೇ ವರ್ಷದ ದಾಂಡೇಲಿ ನವರಾತ್ರಿ ಉತ್ಸವಕ್ಕೆ ಹಳೆ ನಗರಸಭೆಯ ಮೈದಾನದಲ್ಲಿ ಗುರುವಾರ ಅದ್ದೂರಿ ಚಾಲನೆ ದೊರೆತಿದ್ದು, ಮುಂಜಾನೆ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ದಾಂಡೇಲಿ ನಗರಸಭೆ ಮೈದಾನದಲ್ಲಿ ಪ್ರತಿಷ್ಠಾಪನೆಗೊಂಡ ದುರ್ಗಾದೇವಿ

ದಾಂಡೇಲಿಯ ಹಳೆ ನಗರ ಸಭೆಯ ಮೈದಾನ ಇದೀಗ ಹಲವು ಆಕರ್ಷಣೆಗಳೊಂದಿಗೆ ಶೃಂಗಾರಗೊಂಡಿದೆ. ಹೊನ್ನಾವರದ ಕಲಾವಿದ ದಾಮೋದರ ನಾಯ್ಕ ಅವರಿಂದ ರೂಪಗೊಂಡ ಭವ್ಯವಾದ ಮಂಟಪ, ಮಂದಿರದ ರೀತಿಯಲ್ಲಿ ಗೋಚರಿಸುತ್ತಿದೆ. ಇನ್ನೊಂದು ಕಡೆ ದಾಂಡಿಯ ನರ್ತನಕ್ಕೆ ಹಾಕಿದ ವೇದಿಕೆ ಚಂದದಿಂದ ಶೃಂಗಾರಗೊಂಡಿದೆ. ಸಾಂಸ್ಕೃತಿಕ ಸಭಾ ಕಾರ್ಯಕ್ರಮದ ಭವ್ಯ ಸಭಾಂಗಣವು ಸಿದ್ಧಗೊಂಡಿದೆ. ಮತ್ತೊಂದು ಭಾಗದಲ್ಲಿ ಮಕ್ಕಳ ಆಟಿಕೆಗಾಗಿ ಹಲವು ಮನರಂಜನೆಗಳು ಬಂದಿವೆ. ಇನ್ನೊಂದು ಭಾಗದಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳ ಆಹಾರ ಮಳಿಗೆಗಳು ಸಿದ್ಧಗೊಂಡಿವೆ. ಮೈದಾನದ ಪ್ರವೇಶ ದ್ವಾರದಿಂದ ಹಿಡಿದು ಮೈದಾನದ ಒಳಗಿನ ಎಲ್ಲವೂ ಕೂಡ ಬಗೆ ಬಗೆಯ ಅಲಂಕಾರಗಳಿಂದ ಶ್ರಂಗಾರಗೊಂಡಿದೆ.

ನವರಾತ್ರಿಯ 9 ದಿನಗಳ ಕಾಲ ಪೂಜಿಸಲ್ಪಡುವ ದುರ್ಗಾದೇವಿಯ ಮೂರ್ತಿ ಗುರುವಾರ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪನೆಗೊಂಡಿತು. ಎಂಟು ಫೀಟ್ ಎತ್ತರದ ಈ ದುರ್ಗಾದೇವಿಯ ಮೂರ್ತಿ ಎಲ್ಲರನ್ನ ಆಕರ್ಷಿಸುತ್ತಿದೆ. ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಟಿ.ಎಸ್. ಬಾಲಮಣಿ ಹಾಗೂ ಅಶ್ವಿನಿ ಬಾಲಮಣಿ ದಂಪತಿಗಳು ಪೂಜೆ ಸಲ್ಲಿಸುವ ಮೂಲಕ ದುರ್ಗಾದೇವಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಹೆಗಡೆ ಹಾಗೂ ಸುವರ್ಣ ಹೆಗಡೆ ದಂಪತಿಗಳು ಉಪಸ್ಥಿತರಿದ್ದು ಪೂಜೆ ಸಲ್ಲಿಸಿದರು. ನವರಾತ್ರಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌಹಾಣ್, ಕೋಶಾಧ್ಯಕ್ಷ ಅಶುತೋಶ ರಾಯ್ , ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎಸ್. ಪ್ರಕಾಶ್ ಶೆಟ್ಟಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*