ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಖ್ಯಾತ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಹಾಗೂ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗ ಇವರ ಸಾರಥ್ಯದ ಕುಂದಾಪುರದ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಯವರಿಂದ ಆಗಸ್ಟ್ 17ರಂದು ರಾತ್ರಿ 9:30 ಗಂಟೆಗೆ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ‘ಶಿವಶಕ್ತಿ ಗುಳಿಗ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಈ ಯಕ್ಷಗಾನದ ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತರಾದ ರಾಘವೇಂದ್ರ ಮಯ್ಯರ ಮಧುರ ಹಾಡುಗಾರಿಕೆಯಿದೆ. ಮುಮ್ಮೇಳದಲ್ಲಿ ಕೋಡಿ ವಿಶ್ವನಾಥ ಗಾಣಿಗ, ಸನ್ಮಯ ಭಟ್ , ಚಂದ್ರಹಾಸ ಗೌಡ, ಹೊಸಪಟ್ಟಣ, ರಾಜೇಶ ಬೈಕಾಡಿ, ಪ್ರಸನ್ನಕುಮಾರ, ರಜಿತ್ ಕುಮಾರ ವಂಡ್ಸೆ, ಉಳ್ಳೂರು ನಾರಾಯಣ ನಾಯ್ಕ, ಕುಮಾರ ವಿಘ್ನೇಶ ಅಭಿನಯಿಸಲಿದ್ದಾರೆ. ಸ್ತ್ರೀ ಪಾತ್ರಧಾರಿಗಳಾಗಿ ಮಾಧವ ನಾಗೂರು, ರವೀಂದ್ರ ಶೆಟ್ಟಿ ಹಕ್ಲಾಡಿ, ಕುಮಾರ ಅರಳುಸುರುಳಿ ಅಭಿನಯಿಸಲಿದ್ದಾರೆ. ಹಾಸ್ಯ ಪಾತ್ರದಲ್ಲಿ ಕಾರ್ತಿಕ ರಾವ್ ಪಾಂಡೇಶ್ವರ, ಉಳ್ಳೂರು ಶಂಕರ ನಾಯ್ಕ ರಂಜಿಸಲಿದ್ದಾರೆ.
ದಾಂಡೇಲಿಯ ಕಲಾಶ್ರೀ ಸಂಸ್ಥೆ ಪ್ರತಿ ವರ್ಷ ಎರಡು ಉಚಿತ ಯಕ್ಷಗಾನ ಗಳನ್ನು ದಾಂಡೇಲಿಯಲ್ಲಿ ಪ್ರದರ್ಶಿಸುತ್ತಿದ್ದು, ಮಳೆಗಾಲದ ಈ ಯಕ್ಷಗಾನ ಕೂಡ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಹಿರಿಯ ಹಾಗೂ ನುರಿತ ಕಲಾವಿದರಿಂದ ಪ್ರದರ್ಶಿಸಲ್ಪಡುವ ‘ಶಿವಶಕ್ತಿ ಗುಳಿಗ’ ಎಂಬ ಈ ಯಕ್ಷಗಾನ ರಾಜ್ಯದ ವಿವಿದೆಡೆಯಲ್ಲಿ ಈಗಾಗಲೇ ಪ್ರದರ್ಶನಗೊಂಡು ಜನ ಮೆಚ್ಚುಗೆ ಪಡೆದಿದ್ದು, ದಾಂಡೇಲಿಯ ಯಕ್ಷಗಾನಾಸಕ್ತ ಬಹುಜನರ ಕೋರಿಕೆಯ ಮೇರೆಗೆ ಆಗಸ್ಟ್ 17ರಂದು ದಾಂಡೇಲಿಯಲ್ಲಿಯೂ ಪ್ರದರ್ಶನಗೊಳ್ಳಲಿದೆ. ದಾಂಡೇಲಿ ಹಾಗೂ ಸುತ್ತಮುತ್ತಲಿನ ಯಕ್ಷಗಾನಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಕ್ಷಗಾನ ಪ್ರದರ್ಶನಕ್ಕೆ ಮೆರಗು ತರಬೇಕೆಂದು ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಎಸ್. ಪ್ರಕಾಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
Be the first to comment