ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಂದೇ ಕೊನೆಯ ದಿನ

 ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಇಲ್ಲೊಂದು ಉತ್ತಮ ಅವಕಾಶ ಇದೆ. ಉತ್ತರ ಕನ್ನಡ ಜಿಲ್ಲಾ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಗಲಾಗಿದೆ. ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?, ಕೊನೆಯ ದಿನಾಂಕ ಯಾವಾಗ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲಾ ಘಟಕದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ 26 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಬೆರಳಚ್ಚುಗಾರರು, ಟೈಪಿಸ್ಟ್‌ ಕಾಪಿಇಸ್ಟ್‌, ಆದೇಶ ಜಾರಿಕಾರರು 26 ಖಾಲಿ ಇದ್ದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆರಳಚ್ಚುಗಾರರು 03, ಬೆರಳಚ್ಚು ನಕಲುಗಾರರು 03, ಆದೇಶ ಜಾರಿಕಾರರ 20 ಹುದ್ದೆಗಳ ಭರ್ತಿ ನಡೆಯಲಿದೆ.

ಯಾವ ಹುದ್ದೆಗೆ ಏನು ವಿದ್ಯಾರ್ಹತೆ? ಬೆರಳಚ್ಚುಗಾರರು, ಬೆರಳಚ್ಚುಗಾರರ ನಕಲಗಾರರಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಪಿಯುಸಿ ಅಥವಾ ಮೂರು ವರ್ಷಗಳ ಡಿಪ್ಲೊಮಾ ಪರೀಕ್ಷೆಯಲ್ಲಿ ಪಾಸ್‌ ಆಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಬೆರಳಚ್ಚು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು.  ಆದೇಶ ಜಾರಿಕಾರರು ಹುದ್ದೆಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅಲ್ಲದೆ ಲಘು ವಾಹನ ಪರವಾನಿಗೆ ಪಡೆದಿರಬೇಕು.

 ವಯೋಮಿತಿ ಎಷ್ಟು? ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಸಾಮಾನ್ಯ ವರ್ಗದವರು 35 ವರ್ಷಗಳ ವರೆಗೆ ಅವಕಾಶ ನೀಡಲಾಗಿದೆ. ಇನ್ನು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದ್ದು, ಎಸ್‌ಸಿ ಹಾಗೂ ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷದ ಸಡಿಲಿಕೆ ನೀಡಲಾಗಿದೆ.

ವೇತನ ಎಷ್ಟು? ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ 21400 ರಿಂದ 42000 ರೂ ವರಗೆ ವೇತನ ನಿಗದಿ ಪಡಿಸಲಾಗಿದೆ.

ಆಯ್ಕೆ ನಡೆಯುವುದು ಹೇಗೆ? ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಹುದ್ದೆಗೆ ನಿಗಧಿಪಡಿಸಲಾದ ವಿದ್ಯಾರ್ಹತೆಯ ಪರೀಕ್ಷೆ ಮತ್ತು ಅರ್ಹತಾ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಶೇಕಡಾ ವಾರುವಿನ ಆಧಾರದ ಮೇಲೆ ಸಂದರ್ಶನಕ್ಕೆ ಆದ್ಯತೆ. ಆದೇಶ ಜಾರಿಕಾರ ಹುದ್ದೆಗಾಗಿ ಅಭ್ಯರ್ಥಿ 10ನೇ ತರಗತಿ ಪರೀಕ್ಷೆಗಳಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯಲಾಗುವುದ.

  ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕ (ಜುಲೈ 19, 2024) ಆಗಿದೆ. ಸಾಮಾನ್ಯ ವರ್ಗದ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 200 ಶುಲ್ಕ ಹಾಗೂ ಎಸ್‌ಸಿ-ಎಸ್‌ಟಿ ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿ ಪಡೆದಿದ್ದಾರೆ. ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು https://uttarakannada.dcourts.gov.in/online-recruitment/ ಲಿಂಕ್‌ ಓಪನ್ ಮಾಡಿ ಅಗತ್ಯ ಮಾಹಿತಿ ದಾಖಲಿಸಬೇಕಾಗುತ್ತದೆ.


About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*