ಪರಿಶಿಷ್ಟರ ಅಭಿವೃದ್ಧಿ ಅನುದಾನ ಗ್ಯಾರಂಟಿ ಯೋಜನೆಗೆ: ಸ್ಯಾಮಸನ್ ಖಂಡನೆ

ದಾಂಡೇಲಿ: ಪರಿಶಿಷ್ಟ ಸಮುದಾಯದ ಏಳಿಗಾಗಿಯೇ ಹಣವನ್ನು ಮೀಸಲಿಡಲು SCSP/TSP ಕಾನೂನು ಜಾರಿ ಮಾಡಲಾಗಿದ್ದು, ಆದರೆ ಈ ಕಾನೂನಿನ ಕೆಲ ಅಂಶಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳು ಸೇರಿದಂತೆ ಅನ್ಯ ಉದ್ದೇಶಗಳಿಗೆ ಈ ಹಣವನ್ನು ಬಳಸುತ್ತಿರುವುದು SCSP/TSP ಕಾನೂನಿನ ದುರುಪಯೋಗ ಮಾಡಿದಂತಾಗುತ್ತಿದೆ. ಇದನ್ನು ನಾವು ಪ್ರಭಲವಾಗಿ ಖಂಡಿಸುತ್ತಿದ್ದೇವೆ ಎಂದು ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ಡಿಎಚ್ಎಸ್ ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮ್ಸನ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪರಿಶಿಷ್ಟರ ಈ ಮೀಸಲು ನಿಧಿಯನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯು ಪರಿಶಿಷ್ಟ ಸಮುದಾಯಗಳಿಗೆ ಎಸಗುತ್ತಿರುವ ಮಹಾ ವಂಚನೆಯಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಸಮುದಾಯ ಒಪ್ಪುವುದಿಲ್ಲ. ಕೂಡಲೇ ರಾಜ್ಯ ಸರಕಾರ ಈ ಮೀಸಲು ನಿಧಿಯನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಶತಮಾನಗಳಿಂದ ಶೋಷಣೆಗೊಳಗಾದ ಪರಿಶಿಷ್ಠ ಸಮುದಾಯಗಳ ಕಲ್ಯಾಣಕ್ಕೆ ತೆಗೆದಿರಿಸುವ ಅನುದಾನವನ್ನು ಆ ಸಮುದಾಯಕ್ಕೆ ಮಾತ್ರ ವಿನಿಯೋಗಿಸಬೇಕು. ಆದ್ದರಿಂದ ರಾಜ್ಯ ಸರಕಾರ ಪರಿಶಿಷ್ಟರಿಗೆ ಈ ಹಣ ಸದ್ಬಳಕೆ ಆಗುವಂತೆ ತುರ್ತಾಗಿ ಈ ಕಾಯಿದೆಯ ಸೆಕ್ಷನ್ 7ಸಿ ಯನ್ನು ತಿದ್ದುಪಡಿ ಮಾಡಲೇಬೇಕು.

ರಾಜ್ಯ ಸರಕಾರ ಪ್ರತಿವರ್ಷ ಈ ನಿಧಿಯಲ್ಲಿನ ಕೋಟ್ಯಂತರ ರೂಪಾಯಿಗಳನ್ನು ಎಲ್ಲ ಇಲಾಖೆಗಳಿಗೆ ಹಂಚುತ್ತಿದೆ. ಆದರೆ ಈಹಣದ ಸದ್ಬಳಕೆಯ ಕುರಿತು ಮೌಲ್ಯಮಾಪನ ಮಾಡಲು ಮುಂದಾಗದೇ ಜಾಣ ಮೌನ ವಹಿಸುತ್ತಿರುವುದರ ಹಿಂದಿನ ಹುನ್ನಾರವೇನು? ಹಣ ದುರ್ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಈ ಕಾಯ್ದೆಯಡಿ ಅವಕಾಶವಿದೆ. ಆದರೆ ಕೋಟಿಗಟ್ಟಲೇ ಹಣ ದುರುಪಯೋಗ ಆಗುತ್ತಿದ್ದರೂ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಈ ರೀತಿಯಾದರೆ ಶೋಷಿತರನ್ನು ಮುಖ್ಯವಾಹಿನಿಗೆ ತರುವುದಾದರೂ ಹೇಗೆ? ಸರಕಾರ ಈ ರೀತಿಯಲ್ಲಿ ಪರಿಶಿಷ್ಟ ಜನರನದನು ವಂಚಿಸುವುದನ್ನು ಕೂಡಲೇ ನಿಲ್ಲಿಸಬೇಕು. ಪರಿಶಿಷ್ಟ ಸಮುದಾಯಗಳ ಏಳಿಗೆಗಾಗಿ ಬದ್ದತೆಯಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಿ ಇಚ್ಛಾಶಕ್ತಿ ಪ್ರದರ್ಶಿಸಬೇಕು.

ಈಗಲೂ ಪರಿಶಿಷ್ಠ ಸಮುದಾಯಗಳು ಶಿಕ್ಷಣ, ಆರೋಗ್ಯ, ಭೂಮಿ, ವಸತಿ ಸೌಲಭ್ಯಗಳಿಂದ ವಂಚಿತರಾಗಿದ್ದು, ಈ ಕಾಯಿದೆಯನ್ನು ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಸಮರ್ಪಕವಾಗಿ ಬಳಸಿ ದಲಿತ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವ ಮೂಲಕ ಅವರಿಗೂ ಘನತೆಯ ಬದುಕು ಖಾತ್ರಿಪಡಿಸಬೇಕು.

ಈ ಕಾಯಿದೆಯಲ್ಲಿರುವ ದೋಷಗಳನ್ನು ಸರಿಪಡಿಸಲು ಕರ್ನಾಟಕ ಸರಕಾರ ಕೂಡಲೇ ಅಗತ್ಯ ತಿದ್ದುಪಡಿ ತಂದು, ಸಮರ್ಪಕವಾಗಿ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದಲಿತ ಹಕ್ಕುಗಳ ಸಮಿತಿ (ಡಿಎಚ್ಎಸ್) ರಾಜ್ಯವ್ಯಾಪಿ ತೀವ್ರತೆರನಾದ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*