ದಾಂಡೇಲಿ: ಎಲ್ಲರೊಂದಾಗಿ ಬಾಳುವುದೇ ನಮ್ಮ ದೇಶದ ದೊಡ್ಡ ಮೌಲ್ಯ. ಈ ಮೌಲ್ಯದಿಂದಾಗಿಯೇ ಈ ದೇಶ ವಿಶ್ವದ ಗಮನ ಸೆಳೆದಿದೆ. ಇದನ್ನು ಉಳಿಸಿಕೊಳ್ಳಬೇಕು. ಆದರೆ ಆತಂಕಕಾರಿಯಾದ ಸಂಗತಿ ಎಂದರೆ ಜಾತಿ ಧರ್ಮಗಳ ಕಸ ಇಂದು ಯುವ ಸಮಾಜವನ್ನು ಆವರಿಸಿಕೊಳ್ಳುತ್ತಿದೆ ಎಂದು ಖ್ಯಾತ ಸಾಹಿತಿ ಬರಹಗಾರ ಜಯಂತ ಕಾಯ್ಕುಣಿ ನುಡಿದರು.
ಅವರು ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಒಕ್ಕೂಟ, ಕ್ರೀಡಾ ವಿಭಾಗ, ಎನ್ಎಸ್ಎಸ್, ಎನ್‌ಸಿಸಿ ಹಾಗೂ ಸ್ಕೌಟ್ ಮತ್ತು ಗೈಡ್ ವಿಭಾಗಗಳ ಸಮಾರೋಪ ಸಮಾರಂಭ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ನಮ್ಮ ಜೀವನ ದೃಷ್ಟಿಯ ವಿಕಾಸಕ್ಕಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕವಾದ ಚಟುವಟಿಕೆಗಳು ಇರಬೇಕು. ಆದರೆ ಇಂದು ಮೊಬೈಲನಲ್ಲಿ ನಾವೆಲ್ಲ ಕಳೆದು ಹೋಗುತ್ತಿದ್ದೇವೆ. ವಾಟ್ಸಾಪ್, ಫೇಸ್ ಬುಕ್ ನಲ್ಲಿ ಮಾತನಾಡುವ ನಾವು ಫೇಸ್ ಟು ಫೇಸ್ ಮಾತನಾಡದ್ದಷ್ಟು ದೂರವಾಗಿದ್ದೇವೆ. ಮನುಷ್ಯ ಬದುಕನ್ನ ಆನಂದಿಸದ ಬದುಕು ಅದು ನಿಜವಾದ ಬದುಕೆ ಆಗಲಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಂ. ಡಿ. ಒಕ್ಕುಂದರವರು ಜಯಂತ ಕಾಯ್ಕಿಣಿಯವರು ಈ ನಾಡಿನ ಸಾಂಸ್ಕೃತಿಕ ಲೋಕದ ಒಂದು ಸಾಕ್ಷಿ ಪ್ರಜ್ಞೆಯಾಗಿದ್ದರೆ. ಅವರ ಸಹಜವಾದ ಬದುಕು ಮತ್ತು ಸಹಜವಾದ ನುಡಿಗಳೇ ಮಾರ್ಗದರ್ಶಿಯಾದದ್ದು. ಅವರ ಸೃಜನಶೀಲ ಬರಹಗಳನ್ನು ಪ್ರತಿಯೊಬ್ಬರು ಓದಬೇಕು. ಆ ಮೂಲಕ ಸಮತೆ, ಸೌಹಾರ್ದತೆಯ ಬದುಕನ್ನ ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಿ.ಎನ್. ವಾಸರೆ, ಯಾಸ್ಮಿನ್ ಕಿತ್ತೂರ, ಸಹ ಪ್ರಾಧ್ಯಾಪಕ ಡಾ. ನಾಸಿರ ಅಹ್ಮದ್ ಜಂಗುಬಾಯಿ, ನಿವೃತ್ತ ಸಹ ಪ್ರಾಧ್ಯಾಪಕ ಡಾ. ಬಿ. ಎನ್. ಅಕ್ಕಿ, ಸ್ಕೌಟ್ ಮತ್ತು ಗೈಡ್ಸ್ ನ ಸಂಚಾಲಕಿ ತಸ್ಲಿಮಾ ಜೋರುಂ, ವಿದ್ಯಾರ್ಥಿ ಪ್ರತಿನಿದಿಗಳಾದ ಕಾವ್ಯ ಭಟ್, ಸ್ಟ್ಯಾನ್ಲಿ ನೂತಲಪಾಟಿ, ಸೌಮ್ಯ ನೇತ್ರೇಕರ, ಕರಿಷ್ಮಾ ಮರಸ್ಕರ ಮುಂತಾದವರಿದ್ದರು.
ಕಾವ್ಯ ಭಟ್ ಸ್ವಾಗತ ಗೀತೆ ಹಾಡಿದರು. ಉಪನ್ಯಾಸಕ ಡಾ. ನಾಸಿರ್ ಅಹಮದ್ ಜಂಗುಬಾಯಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಪದ್ಮಾವತಿ ಅನಸ್ಕರ ಆಶಯ ನುಡಿದರು. ಡಾ ವಿನಯ ಜಿ. ನಾಯಕ ಜಯಂತ್ ಕಾಯ್ಕಿಣಿಯವರನ್ನು ಪರಿಚಯಿಸಿದರು. ಸೌಮ್ಯ ನೇತೃೇಕರ್ , ವರ್ಷಾ ಕೋಲೆ, ಶೋಭಾ ಪಾಟೀಲ್ ಕಾವ್ಯ ಗಾಯನ ಹಾಗೂ ಕವಿತೆ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ದಂಪತಿಗಳನ್ನು ಹಾಗೂ ಲಾಯನ್ಸ್ ಕ್ಲಬ್ ಕಾರ್ಯದರ್ಶಿ ಉಪನ್ಯಾಸಕ ಡಾ. ನಾಸಿರ್ ಅಹ್ಮದ್ ಜಂಗೂಬಾಯಿಯವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉತ್ತನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾಲೇಜಿನ ಕ್ರೀಢಾ ವಿಭಾಗದ ಸಂಚಾಲಕ ಬಸವರಾಜ್ ಹುಲಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ನಾಯ್ಕ ವಂದಿಸಿದರು.
ಉತ್ತಮ ಸುದ್ದಿ ಸಮಾಚಾರ.