ಜೋಯಿಡಾ ತಾಲೂಕಿನ ಗುಂದದ ನಾದವರ್ಷಣಿ ಟ್ರಸ್ಟ್ ನಿಂದ ಯುಗಾದಿ ಹಬ್ಬದ ಪ್ರಯುಕ್ತ ಏಪ್ರಿಲ್ 9 ರಂದು ‘ವಸಂತ ನಾದಮೃತ’ ಕಾರ್ಯಕ್ರಮ ನಡೆಯಲಿದೆ.
ಅಂದು ಸಾಯಂಕಾಲ 5:30 ಗಂಟೆಗೆ ನಂದಿಗದ್ದೆಯ ಬಯಲು ರಂಗ ಮಂದಿರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಯರಮುಖದ ಸೋಮೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ವೇದಮೂರ್ತಿ ಶ್ರೀ ಪ್ರಸನ್ನ ಆರ್. ಭಟ್ಟ ಕರ್ಕಮನೆ ಉದ್ಘಾಟಿಸಲಿದ್ದಾರೆ. ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯರಾದ ಎಸ್. ಎಸ್. ಭಟ್ಟ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ, ಯರಮುಖದ ಎನ್. ಎಸ್. ಎಸ್. ಸಂಘದ ಅಧ್ಯಕ್ಷ ಆರ್. ವಿ. ದಾನಗೇರಿ, ಗುಂದ ಸೀಮಾ ಪರಿಷತ್ ಅಧ್ಯಕ್ಷ ಡಿ.ಟಿ. ಹೆಗಡೆ, ಮಾತ್ರ ಮಂಡಳಿಯ ಅಧ್ಯಕ್ಷೆ ಸೀತಾ ದಾನಗೇರಿ ಅತಿಥಿಗಳಾಗಿರಲಿದ್ದಾರೆ.
ಸಂಜೆ 6:30 ರಿಂದ ವಿದ್ಯಾಲಯದ ಹಿರಿಕಿರಿಯ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ, ರಾತ್ರಿ 8.30 ರಿಂದ ಪ್ರಸಿದ್ಧ ಸಂಗೀತ ಕಲಾವಿದರಾದ ವಿದ್ವಾನ್ ವಿನಾಯಕ್ ಹೆಗಡೆಯವರಿಂದ ಶಾಸ್ತ್ರೀಯ ಗಾಯನ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸತೀಶ್ ಭಟ್, ಹೆಗ್ಗಾರ್ ವಿಘ್ನೇಶ ಭಾಗವತ, ಯಲ್ಲಾಪುರ ಹಾರ್ಮೋನಿಯಂ ಸಾಥ್ ನೀಡಿದರೆ, ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ನಾಗೆಂದ್ರ ವೈದ್ಯ ,ಹೆಗ್ಗಾರ್ ತಬಲಾ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾದವರ್ಷಿಣಿ ಟ್ರಸ್ಟ್ ನ ಅಧ್ಯಕ್ಷರಾದ ಸುಧಾಮ ದಾನಗೇರಿ ಮನವಿ ಮಾಡಿದ್ದಾರೆ.
Be the first to comment