ಬಿಕಾಂ 5 ನೇ ಸೆಮಿಸ್ಟರ್ ಫಲಿತಾಂಶದಲ್ಲಿ ಬಂಗೂರನಗರ ಪದವಿ ವಿದ್ಯಾರ್ಥಿಗಳ ಸಾಧನೆ

ದಾಂಡೇಲಿ: ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಕಾಂ 5ನೇ ಸೆಮಿಸ್ಟರ್‌ನ ಫಲಿತಾಂಶ ಪ್ರಕಟವಾಗಿದ್ದು, ಬಂಗೂರನಗರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಕಾಲೇಜಿನ ತೇಜು ಭಂಡಾರಿ ಶೇ. 93 ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಇವಳು ಆಡಿಟಿಂಗ್ ಮತ್ತು ಆಶುರೆನ್ಸ್ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಹಾಗೂ ಕಾಸ್ಟ್ ಅಕೌಂಟಿಂಗ್, ಕಂಪ್ಯೂಟರ್ ಮತ್ತು ಅಪ್ಲಿಕೇಶನ್ ವಿಷಯದಲ್ಲಿ ೧೦೦ ಕ್ಕೆ ೯೯ ಅಂಕಗಳನ್ನು ಗಳಿಸಿರುತ್ತಾಳೆ. ಸೋನಲ್ ಮಾನಗೆ ಶೇ. 01.5 ಅಂಕ ಗಳಿಸಿ ಆಡಿಟಿಂಗ್ ಮತ್ತು ಆಶುರೆನ್ಸ್ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕ ಪಡೆದರೆ, ಕಾರ್ತಿಕ್ ಪ್ರಭು ಮ್ಯಾನೇಜ್ಮೆಂಟ್ ಅಕೌಂಟಿಂಗ್ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕ ಹಾಗೂ ತುಶಾರ ನಾಯ್ಕ ಕಂಪ್ಯೂಟರ್ ಮತ್ತು ಅಪ್ಲಿಕೇಶನ್ ವಿಷಯದಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಇವರ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ.ಎಲ್. ಗುಂಡೂರ, ಆಡಳಿತ ಮಂಡಳಿಯವರು, ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು, ಐಕ್ಯೂಎಸಿ ವಿಭಾಗದ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ವೃಂದದವರು ಶುಭಾಶಯವನ್ನು ಕೋರಿರುತ್ತಾರೆ

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*