ದೇಶದಲ್ಲಿ ಅಪಾಯಕಾರಿಯಾದ ಸಾಂಸ್ಕೃತಿಕ ರಾಜಕಾರಣ ನಡೆಯುತ್ತಿದೆ – ಚಂದ್ರ ಪೂಜಾರಿ ಕಳವಳ
(ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ “ಪ್ರೀತಿಪದ” ಪ್ರಾರಂಭ
ಕಾರವಾರ: ಭಾರತ ದೇಶವನ್ನು ಜಾತಿ ಧರ್ಮಗಳ ಹೆಸರಿನಲ್ಲಿ ಒಡೆಯುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ದೇಶವನ್ನು ಮುನ್ನಡೆಸುವ ಬದಲು ಹಿಮ್ಮುಖವಾಗಿ ತಳ್ಳುತ್ತಿವೆ. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬಾರದು, ಅವರ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೊಡಬಾರದು ಎಂಬ ಅತ್ಯಂತ ಅಪಾಯಕಾರಿಯಾದ ಸಾಂಸ್ಕೃತಿಕ ರಾಜಕಾರಣ ನಮ್ಮ ದೇಶದಲ್ಲಿ ನಡೆಯುತ್ತಿದೆ […]