ಉತ್ತರ ಕನ್ನಡ

‘ಕೋವಿಗೊಂದು ಕನ್ನಡಕ’ ಹೊನ್ನಾವರದಲ್ಲಿ ಯಶಸ್ವೀ ಪ್ರದರ್ಶನ

ತೆಳುವಾದ ಸಂಗೀತದೊಂದಿಗೆ ನಾಟಕ ಪ್ರಾರಂಭವಾಗಿದೆ. ಕನ್ನಡಕ ಫ್ರೇಮಿನಾಕಾರದ ಕಾರ್ಪೆಟ್ಟಿನ ಮೂರು ಮೂಲೆಗಳಿಂದ ಮೂರು ಮಂದಿ ಅರೆನಾ ವನ್ನು ಪ್ರವೇಶಿಸಿದ್ದಾರೆ. ಮೂವರೂ ಬಾಯ್ಕಟ್ಟು ಕಟ್ಟಿಕೊಂಡಿದ್ದಾರೆ. ಒಂದು ಸಂಧಿಯಲ್ಲಿ ಸೇರುವ ಮೂವರದೂ ಒಂಥರಾ ಗುಮಾನಿಯ ನೋಟ. ನಿಧಾನಕ್ಕೆ ಒಬ್ಬೊಬ್ಬರೂ ಬಾಯ್ಕಟ್ಟು ಬಿಚ್ಚುತ್ತಾ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ ಗಹಗಹಿಸಿ ನಗತೊಡಗುತ್ತಾರೆ. ಇಂಥದೊಂದು ಸ್ಫೋಟಕ ನಗುವಿನ […]

ಈ ಕ್ಷಣದ ಸುದ್ದಿ

ಕರ್ತವ್ಯದ ಅವಧಿಯಲ್ಲಿ ಲೋಪವಾಗದಿರಲಿ: ಸರಕಾರಿ ನೌಕರರಿಗೆ ಕಟ್ಟು ನಿಟ್ಟಿನ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ತಮ್ಮ ತಮ್ಮ ಕಚೇರಿಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಯಾವುದೇ ರೀತಿಯ ಲೋಪ ಎಸಗದೆ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸತಕ್ಕದ್ದು ಎಂದು ರಾಜ್ಯ ಸರ್ಕಾರ ಕಟ್ಟುನಿಟ್ಟಾದ ಆದೇಶವನ್ನು ಹೊರಡಿಸಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾರವರು ರಾಜ್ಯ ಸರ್ಕಾರದ ಕಛೇರಿಗಳಲ್ಲಿ ನಿಗದಿತ […]

ಈ ಕ್ಷಣದ ಸುದ್ದಿ

ಉತ್ತರ ಕನ್ನಡ ಜಿಲ್ಲೆಯಲ್ಲೆರಡು ಬಹು ವಿಶೇಷತೆಯುಳ್ಳ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಯಾಗಲೇಬೇಕು

ದಾಂಡೇಲಿ: ಭೌಗೋಳಿಕವಾಗಿ ಅತ್ಯಂತ ವಿಸ್ತಾರವಾಗಿರುವ ಹಾಗೂ ಹಾಗೂ ಗುಡ್ಡಗಾಡುಗಳಿಂದ ಆವೃತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು (ಘಟ್ಟದ ಮೇಲೊಂದು ಹಾಗೂ ಘಟ್ಟದ ಕೆಳಗೊಂದು) ಬಹು ವಿಶೇಷತೆಯುಳ್ಳ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಗಳು ಆಗಲೇಬೇಕು. ಈ ವಿಚಾರವಾಗಿ ಪಕ್ಷಾತೀತವಾಗಿ ನಡೆಯುವ ಎಲ್ಲ ಹೋರಾಟಗಳ ಜೊತೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ […]

ಈ ಕ್ಷಣದ ಸುದ್ದಿ

ಕೋಗಿಲಬನ ರುದ್ರಭೂಮಿಯಲ್ಲಿ 17 ಲಕ್ಷ ರು. ವೆಚ್ಚದಲ್ಲಿ ಕಾಗದ ಕಾರ್ಖಾನೆಯಿಂದ ನಿರ್ಮಾಣಗೊಂಡ ಶವಸಂಸ್ಕಾರ ಕಟ್ಟಡ

ದಾಂಡೇಲಿ: ಕೊನೆಗೂ ಕೋಗಿಲಬನ ರುದ್ರಭೂಮಿಯಲ್ಲೊಂದು ಸುಸಜ್ಜಿತವಾದ ಶವಸಂಸ್ಕಾರ ಕಟ್ಟಡ ನಿರ್ಮಾಣಗೊಂಡಿದ್ದು, ದಾಂಡೇಲಿಗರ ಬಹುದಿನಗಳ ಬೇಡಿಕೆ ಕಾಗದ ಕಾರ್ಖಾನೆಯವರಿಂದ ಈಡೇರುವಂತಾಗಿದೆ. ದಾಂಡೇಲಿಯಲ್ಲಿ ಪಟೇಲ ನಗರ ಮತ್ತು ಕೋಗಿಲಬನದಲ್ಲಿ ಪ್ರತ್ಯೇಕ ರುದ್ರಭೂಮಿಗಳಿವೆ. ಪಟೇಲನಗರದ ಹಿಂದೂ ರುದ್ರಭೂಮಿಗೆ ನಗರಸಭೆಯಿಂದ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಕೋಗಿಲಬನದ ರುದ್ರಭೂಮಿ ಹಲವು ಸೌಕರ್ಯಗಳ ಕೊರತೆಯಿಂದ ಕೂಡಿತ್ತು. […]

ಉತ್ತರ ಕನ್ನಡ

ಹೊಸತನದ ಹಂಬಲದ ನಡಿಗೆಯಲ್ಲಿ ಹೆಜ್ಜೆಯಿಡುತ್ತಿರುವ ಬಹುಮುಖ ಪ್ರತಿಭೆಯ ಶಿಕ್ಷಕಿ ಭಟ್ಕಳದ ಜಯಶ್ರೀ ಆಚಾರಿ

ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ತು ತನ್ನ ಹಲವು ಕಾರ್ಯ ಸಾಧನೆಯ ಮೂಲಕ ನಾಡಿನ ಗಮನ ಸೆಳೆದ ಮಹತ್ವದ ಸಂಘಟನೆಯಾಗಿದೆ. ಶಿಕ್ಷಕರಲ್ಲಿರುವ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆ ನಿರ್ಮಿಸಿ ಅವರ ಪ್ರತಿಭೆಯನ್ನು ಪರಿಚಯಿಸುವುದರ ಮೂಲಕ ವೃತ್ತಿ ಪಾವಿತ್ರ್ಯತೆಗೆ ಗೌರವ ತಂದುಕೊಟ್ಟ ಪರಿಷತ್ತು ತನ್ನ ವಿಭಿನ್ನ ಆಲೋಚನೆ ಮೂಲಕ ಶಿಕ್ಷಣ ಇಲಾಖೆಯ […]

ಉತ್ತರ ಕನ್ನಡ

ಸದ್ದಿಲ್ಲದೆ ದುಡಿದ ಕಾಯಕಯೋಗಿ ಕುಮಟಾ ಹೊಲನಗದ್ದೆ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರದೀಪ ರಾಮಚಂದ್ರ ನಾಯಕ

ನಾಡಿನ ತುಂಬೆಲ್ಲ ಅಡಗಿರುವ ಅನರ್ಗ್ಯ ರತ್ನಗಳನ್ನು ಹುಡುಕಿ ಶಿಕ್ಷಕರಿಂದ, ಶಿಕ್ಷಕರಿಗಾಗಿ, ಶಿಕ್ಷಕರೇ ನಡೆಸುವ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದರ ಮೂಲಕ ನಮ್ಮ ನಡುವೆ ಇದ್ದು ನಮ್ಮಂತಾಗದೆ ಶಿಕ್ಷಣ ಇಲಾಖೆಯ ಸಂಪರ್ಕದ ಕೊಂಡೆಯಂತಿರುವ ಕ್ಷೇತ್ರ ಸಂಪನ್ಮೂಲ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ […]

ಈ ಕ್ಷಣದ ಸುದ್ದಿ

ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಗ್ರಹಿಸಿ ಪತ್ರ ಚಳವಳಿ…

ಅಂಕೋಲಾ : ಸಮಾಜ ಸುಧಾರಕ ಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಆಗ್ರಹಿಸಿ ಪತ್ರ ಚಳವಳಿ ಸಿದ್ದತೆಗಳು ನಡೆಯುತ್ತಿದ್ದು, ಪಕ್ಷಾತೀತವಾಗಿ ಸರಕಾರವನ್ನು ಒತ್ತಾಯಿಸುವ ಹೋರಾಟಕ್ಕೆ ನಾರಾಯಣಗುರು ವೇದಿಕೆ ಅಣಿಯಾಗುತ್ತಿದೆ. ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ರಚಿಸುವಂತೆ ರಾಜ್ಯ ಸರಕಾರಕ್ಕೆ ಪ್ರತಿಭಟನೆಯ ಮೂಲಕ ಅನೇಕ ಬಾರಿ ಆಗ್ರಹಿಸಿದ್ದರೂ ಇನ್ನುವರೆಗೂ ಯಾವುದೇ […]

ದಾಂಡೇಲಿ

ಸಾಹಿತ್ಯದ ಓದು ಸೃಜನಶೀಲತೆಗೆ ಪ್ರೇರಕ- ಡಾ. ಅಕ್ಕಿ’ ಅಭಿಮತ (ಅಭಿರುಚಿ ಪುಸ್ತಕ ಪ್ರೇಮಿ ಬಳಗ’ ಉದ್ಘಾಟನೆ)

ದಾಂಡೇಲಿ: ಸಾಹಿತ್ಯ ಕೃತಿಗಳ ಓದು ವಿದ್ಯಾರ್ಥಿಗಳ ಸೃಜನಶೀಲತೆಗೆ ಪ್ರೇರಣೆ ನೀಡುತ್ತದೆ. ಸೂಕ್ಷ್ಮ ಸಂವೇದನಾಶೀಲತೆಯನ್ನು ಕಲಿಸುತ್ತದೆ. ಬದುಕನ್ನು ಅರ್ಥಪೂರ್ಣವಾಗಿ ಕಳೆಯುವ ದಾರಿಗಳನ್ನು ತೆರೆಯುತ್ತದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಡಾ. ಬಿ.ಎನ್. ಅಕ್ಕಿ ಅಭಿಪ್ರಾಯಪಟ್ಟರು. ಅವರು ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ […]

ಈ ಕ್ಷಣದ ಸುದ್ದಿ

ಕಸಾಪ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಕನ್ನಡ ಸಾಹಿತ್ಯ ಪರಿಷತ್ತು ೨೦೨೨-೨೩ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆಅರ್ಜಿಗಳನ್ನು ಆಹ್ವಾನಿಸಿದೆ. ೨೦೨೨ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯುವ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ ೧೫ರವರೆಗೆ ದಂಡ ಶುಲ್ಕ ರೂ.೫೦-೦೦ ಅನ್ನು ಹೆಚ್ಚುವರಿಯಾಗಿ ನೀಡಿ ಅರ್ಜಿ ಸಲ್ಲಿಸಬಹುದು. ರೂ.೨೫-೦೦ […]

ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆ ಸಾಹಿತ್ಯಿಕ, ಸಾಂಸ್ಕೃತಿಕ ಸಂಪತ್ತಿನ ಆಗರವಾಗಿದೆ -ಡಾ. ವಸಂತಕುಮಾರ

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆ ಮಹಾಕವಿ ಪಂಪನ ಆದಿಯಾಗಿ ಹಲವಾರು ದಿಗ್ಗಜ ಸಾಹಿತಿಗಳನ್ನು ಕಂಡಿದೆ.  ವೈಶಿಷ್ಟ್ಯಪೂರ್ಣವಾದ ಬುಡಕಟ್ಟು ಸಂಸ್ಕೃತಿಯನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಶ್ರೀಮಂತವಾಗಿರುವ ಈ ಜಿಲ್ಲೆ ಸಾಹಿತ್ಯಿಕ,  ಸಾಂಸ್ಕೃತಿಕ  ಸಂಪತ್ತಿನ ಆಗರವೂ ಆಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ ನುಡಿದರು. ಅವರು […]