ನಿರೀಕ್ಷೆಗೂ ಮುನ್ನವೇ ಭರ್ತಿಯಾದ ಬೊಮ್ನಳ್ಳಿ ಪಿಕ್ ಅಪ್ ಡ್ಯಾಂ
ದಾಂಡೇಲಿ ತಾಲ್ಲೂಕಿನ ಬೊಮ್ನಳ್ಳಿಯಲ್ಲಿರುವ ಬೊಮ್ನಳ್ಳಿ ಪಿಕಪ್ ಡ್ಯಾಂ ಭರ್ತಿಯಾಗಿದ್ದು ಜಲಾಶಯದ ಎರಡು ಗೇಟ್ ಗಳಿಂದ ಮೂರು ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಕಾಳಿ ನದಿಯ ಹರಿಯುವಿಕೆಯಲ್ಲಿ ಸೂಪಾ ಜಲಾಶಯದ ನಂತರ ಬರುವ ಎರಡನೆಯ ಜಲಾಶಯ ಇದಾಗಿದೆ. ಇದನ್ನ ಪಿಕಪ್ ಡ್ಯಾಂ ಎಂದೂ ಕರೆಯಲಾಗುತ್ತಿದ್ದು ನೀರನ್ನು ಸಂಗ್ರಹಿಸಿಡುವ ವ್ಯವಸ್ಥೆಯನ್ನು ಮಾಡಲಾಗಿದೆ. […]