ದಾಂಡೇಲಿ: ನಗರದ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಾಂಡೇಲಿಯ ವಿದ್ಯಾಧಿರಾಜ ಸಭಾಭವನದಲ್ಲಿ ಶನಿವಾರ, ಜುಲೈ 30 ರಂದು ರಾತ್ರಿ 9 ಗಂಟೆಯಿಂದ ರಾಮಾಂಜನೇಯ ಹಾಗೂ ನಾಗಶ್ರೀ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ .
ದಾಂಡೇಲಿ ನಗರದ ಕಲಾಶ್ರೀ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ದಾಂಡೇಲಿಯಲ್ಲಿ ಪ್ರತಿವರ್ಷ 2 ಯಕ್ಷಗಾನ ಪ್ರದರ್ಶಿಸುತ್ತ ಬಂದಿತ್ತು. ಅದರೆ ಕೋವಿಡ್ ಕಾರಣಗಳಿಂದ ಕಳೆದೆರಡು ವರ್ಷಗಳಿಂದ ಅದು ಸಾಧ್ಯವಾಗಿರಲಿಲ್ಲ . ಈಗ ವರ್ಷ ಮತ್ತೆ ದಾಂಡೇಲಿಯಲ್ಲಿ ಯಕ್ಷಗಾನದ ಸೊಬಗು ಜನರಿಗೆ ಸಿಗಲಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಹೆಸರಾಂತ ಭಾಗವತರಾದ ರಾಘವೇಂದ್ರ ಮಯ್ಯ ಹಾಗೂ ರಾಮಕಷ್ಣ ಹಿಲ್ಲೂರವರು ಭಾಗವತರಾಗಿ ಗಮನ ಸೆಳೆಯಲಿದ್ದಾರೆ. ಕೊಂಡದಕುಳಿ ರಾಮಚಂದ್ರ ಹೆಗಡೆ ಹಾಗೂ ತೋಟಿಮನೆ ಗಣಪತಿ ಹೆಗಡೆಯವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಕೋಡಿ ವಿಶ್ವನಾಥ ಗಾಣಿಗ, ತೊಂಬೆಟ್ಟು ವಿಶ್ವನಾಥ ಆಚಾರ್ಯ’ ಹೊಸಪಟ್ಟಣ ಚಂದ್ರಹಾಸ ಗೌಡ, ಸಿದ್ಧಾಪುರ ನಿತಿನ್ ಶೆಟ್ಟಿ, ಉಪ್ಪುಂದ ಕೃಷ್ಣ ದೇವಾಡಿಗ, ವಸಂತ್ ನಾಯ್ಕ, ಮಂಜುನಾಥ ಶೆಟ್ಟಿ, ರಜಿತ್ ಕುಮಾರ್ ವಂಡ್ಸೆ ಮುಂತಾದವರು ಅಭಿನಯಿಸಲಿದ್ದಾರೆ .
ಈ ಯಕ್ಷಗಾನ ಉಚಿತ ಪ್ರದರ್ಶನವಾಗಿದ್ದು ದಾಂಡೇಲಿಯ ಹಾಗೂ ಸುತ್ತಮುತ್ತಲ ಪ್ರದೇಶಗಳ ಯಕ್ಷಗಾನಾಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಎಸ್. ಪ್ರಕಾಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
Be the first to comment