
ದಾಂಡೇಲಿ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರೋಟರಿ ಶಾಲಾ ಸಭಾ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಯೋಗೇಶ ಸಿಂಗ್, ಕಾರ್ಯದರ್ಶಿಯಾಗಿ ಮಿಥುನ್ ನಾಯಕ, ಖಜಾಂಚಿಯಾಗಿ ಸುಧಾಕರ ಶೆಟ್ಟಿ ಹಾಗೂ ಇತರೆ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.

ರೋಟರಿ ಜಿಲ್ಲಾ ಪ್ರಾಂತಪಾಲ ವೆಂಕಟೇಶ ದೇಶಪಾಂಡೆ ಪ್ರಮಣ ವಚನ ಬೋಧಿಸಿ ಮಾತನಾಡಿದರು. ಸಮಾಜದಲ್ಲಿ ಹಲವಾರು ಸಮಸ್ಯೆಗಳಿವೆ. ಸಮಸ್ಯೆಗಳನ್ನು ಅನುಭವಿಸುತ್ತಿರುವ ಸಾಕಷ್ಟು ಜನ ಸಮುದಾಯವಿದೆ. ಸೌಕರ್ಯಗಳ ಕೊರತೆಯಿರುವ ವ್ಯವಸ್ಥೆಯಿದೆ. ಇಂಥಹ ಕಡೆಗಳಲ್ಲಿ ನಮ್ಮಿಂದಾದ ಸಹಾಯ ಹಾಗೂ ಸಮಾಜ ಸೇವೆ ಮಾಡುವ ಮೂಲಕ ನಾವು ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಇದು ರೋಟರಿಯ ಧ್ಯೇಯ ಕೂಡಾ ಆಗಿದೆ. ಆ ನಿಟ್ಟಿನಲ್ಲಿ ದಾಂಡೇಲಿ ರೋಟರಿ ಕ್ಲಬ್ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಸಹಾಯಕ ಪ್ರಾಂತಪಾಲ ಡಾ. ಕವನ್ ದೇಶಪಾಂಡೆ ರೋಟರಿಯ ದ್ಯೇಯೋದ್ದೇಶ ವಿವರಿಸಿದರು. ನಿರ್ಗಮಿತ ಅಧ್ಯಕ್ಷ ಯು.ಡಿ. ನಾಯ್ಕ, ಡಾ. ಸಯ್ಯದ್ ಅಸೀಪ್ ದಫೇದಾರ್ ಮುಂತಾದವರು ವೇದಿಕೆಯಲ್ಲಿದ್ದರು.
ಎಸ್. ಸೋಕುಮಾರ್, ಎಸ್. ಪ್ರಕಾಶ ಶೆಟ್ಟಿ, ರವಿಕುಮಾರ ನಾಯಕ, ರಾಹುಲ ಬಾವಾಜಿ ಅತಿಥಿಗಳನ್ನು ಪರಿಚಯಿಸಿದರು. ನಿರ್ಗಮಿತ ಅಧ್ಯಕ್ಷ ಯು.ಡಿ. ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ತಮ್ಮ ಅವಧಿಯಲ್ಲಾದ ಕಾರ್ಯಗಳ ಬಗ್ಗೆ ತಿಳಿಸಿದರು. ಹಾಲಿ ಕಾರ್ಯದರ್ಶಿ ಮಿಥುನ್ ನಾಯಕ ವಂದಿಸಿದರು. ಎಚ್. ವೈ. ಮೆಹರ್ವಾಡೆ ನಿರೂಪಿಸಿದರು.
ರೋಟರಿ ಪದಗ್ರಹಣ ಕಾರ್ಯಕ್ರಮದ ವಿಡಿಯೋ ತುಣುಕು ನೋಡಿ…..

Be the first to comment