ನಿವೃತ್ತ ಉಪನ್ಯಾಸಕ ಎನ್.ಕೆ. ಭಟ್ಟ ಇನ್ನಿಲ್ಲ
ದಾಂಡೇಲಿಯ ಜನತಾ ವಿದ್ಯಾಲಯದ ನಿವೃತ್ತ ಉಪನ್ಯಾಸಕ, ಲೇಖಕ ಎನ್.ಕೆ. ಭಟ್ಟರವರು ಶುಕ್ರವಾರ ನಸುಕಿನ ಜಾವ ಕೊನೆಯುಸಿರೆಳೆದರು. ಕನ್ನಡ ಹಾಗೂ ಇಂಗ್ಲೀಷ ಭಾಷೆಯಲ್ಲಿ ಅಪಾರ ಜ್ಞಾನ ಹೊಂದಿದ್ದ ಎನ್.ಕೆ. ಭಟ್ಟರವರು ಸಾಹಿತ್ಯಾಸಕ್ತರೂ ಆಗಿದ್ದರು. ಕೆಲಕಾಲ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದರು. ನಿವೃತ್ತಿಯ ನಂತರ ಶಿರಸಿಯಲ್ಲಿ ವಾಸವಾಗಿದ್ದ ಇವರು ಹಲವು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುತ್ತಿದ್ದರು. […]