ಶಿರಸಿ ಮಾರಿಕಾಂಬಾ ದೇವಸ್ಥಾನದ ಕಾರ್ತಿಕೋತ್ಸವಕ್ಕೆ ಬನ್ನಿ…

ಶಿರಶಿ: ಶಕ್ತಿ ದೇವತೆ ಮಾರಿಕಾಂಬಾದೇವಸ್ಥಾನದ ಕಾರ್ತಿಕ ಉತ್ಸವವು ಡಿಸೆಂಬರ 29 ರಿಂದ ಜನವರಿ 1 ರವರೆಗೆ ನಡೆಯಲಿದೆ ಎಂದು ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ವೆಂಕಟೇಶ್ ನಾಯ್ಕ ತಿಳಿಸಿದ್ದಾರೆ.

ಡಾ. ವೆಂಕಟೇಶ್ ನಾಯ್ಕರಿಂದ ಸುದ್ದಿಗೋಷ್ಠಿ

ಶನಿವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ತಿಕ ಉತ್ಸವವನ್ನು ಸರಕಾರದ ಆದೇಶದಂತೆ ಸರಳವಾಗಿ ಹಾಗೂ ಕೋವಿಡ್ ಮುಂಜಾಗೃತೆಯೊಂದಿಗೆ ಪ್ರದಾಯಿಕವಾಗಿ ಆಚರಿಸಲಾಗುವುದು. ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿರುತ್ತದೆ.

ಡಿಸೆಂಬರ್ 29 ಮಂಗಳವಾರದ “ದೀಪೋತ್ಸವ”ದಂದು ಶ್ರೀದೇವಿಯ ಪಲ್ಲಕ್ಕಿಯು ರಾತ್ರಿ 8 ಘಂಟೆಗೆ ದೇವಾಲಯದ ಆವಾರದಿಂದ ಜಾತ್ರಾ ಗದ್ದುಗೆಗೆ ತೆರಳಲಿದೆ. ನಂತರ ಅಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಮರಳಲಿದೆ.

ರಾತ್ರಿ 10 ಘಂಟೆಗೆ ಮಹಾಮಂಗಳಾರತಿಯೊಡನೆ ಪ್ರಸಾದ ವಿತರಣೆ ನಡೆಸಿ ದೇವಾಲಯವನ್ನು ಬಂದ್ ಮಾಡಲಾಗುವುದು.

ಜನವರಿ 1 ರಂದು ಶುಕ್ರವಾರ ರಾತ್ರಿ 9 ಘಂಟೆಗೆ ದೀಪೋತ್ಸವ ಹಾಗೂ ರಾತ್ರಿ 10 ಘಂಟೆಗೆ ಮಹಾ ಮಂಗಳಾರತಿ ನಡೆಯಲಿದೆ. ನಂತರ ಪ್ರಸಾದ ವಿತರಿಸಿ ದೇವಸ್ಥಾನ ಬಂದ್ ಮಾಡಲಾಗುತ್ತದೆ . ಸಾಂಪ್ರದಾಯಿಕವಾಗಿ ಹಾಗೂ ಸರಳವಾಗಿ ನಡೆಯುವ ಕಾರ್ತಿಕ ಉತ್ಸವದಲ್ಲಿ ಭಕ್ತರು ಭಾಗವಹಿಸುವಂತೆ ಡಾ. ವೆಂಕಟೇಶ ನಾಯ್ಕ ಮನವಿ ಮಾಡಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*