ದಾಂಡೇಲಿ: ನಗರದ ಕನ್ಯಾ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಬಸವರಾಜ ಕಣಸೋಗಿ (61) ಹೃದಯಾಘಾತದಿಂದ ಬುಧವಾರ ಕೊನೆಯುಸಿರೆಳೆದರು.
ಮೈಸೂರಿನಲ್ಲಿ ಮಗಳ ಮನೆಯಲ್ಲಿರುವಾಗ ನಸುಕಿನ ಜಾವ ಹೃದಯ ಸ್ಥಂಬನವಾಯಿತೆಂದು ತಿಳಿದು ಬಂದಿದೆ.
ಕಣಸೋಗಿಯವರು ಖಾಸಗಿ ಶಾಲಾ ಉದ್ಯೋಗಿಯಾಗಿ, ಕೆಲಕಾಲ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಕನ್ಯಾ ವಿದ್ಯಾಲಯದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಕಳೆದ ವರ್ಷವಷ್ಟೇ ನಿವೃತ್ತರಾಗಿದ್ದರು.
ಮಡದಿ, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಸವರಾಜ ಕಣಸೋಗಿ ಅವರ ಸಾವಿನ ಸುದ್ದಿ ತಿಳಿದು ನಿಜಕ್ಕೂ ಆಘಾತವಾಯ್ತು.ಅವರ ಕುಟುಂಬದವರಿಗೆ ನೋವು ನೀಗಿಸಿಕೊಳ್ಳಲು ಆ ದಯಾಮಯನು ಶಕ್ತಿಯನ್ನು ನೀಡಲಿ.ಅಪಾರ ಸಂತಾಪಗಳು.😓🙏🏻