ಭಗತ್‌ಸಿಂಗ್ ಬಳಗದಿಂದ ಯಶಸ್ವಿಯಾಗಿ ನಡೆದ ಹತ್ತನೇ ವರ್ಷದ ರಕ್ತದಾನ ಶಿಬಿರ

ದಾಂಡೇಲಿ: ಭಗತ್ ಸಿಂಗ್ ಸ್ಮರಣಾರ್ಥ ಕಳೆದ ಹತ್ತು ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸಿಕೊಂಡು ಬಂದಿರುವ ದಾಂಡೇಲಿಯ ಭಗತ್‌ಸಿಂಗ್ ಯುವ ಬಳಗದವರು ಈ ಬಾರಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಸರಕಾರಿ ನೌಕರರ ಸಂಘ, ಬಂಗೂರನಗರ ಪದವಿ ಕಾಲೇಜಿನ ಎನ್.ಎಸ್. ಎಸ್. ಘಟಕ, ವಕೀಲರ ಸಂಘ ಹಾಗೂ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತಭಂಡಾರ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವೀರಭದ್ರೇಶ್ವರ ಸಭಾಭವನದಲ್ಲಿ ಸಂಘಟಿಸಿದ್ದ ರಕ್ತದಾನ ಶಿಬಿರ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಹುಬ್ಬಳ್ಳೀಯ ರಾಷ್ಟೊçÃತ್ಥಾನ ರಕ್ತ ಭಂಡಾರ ಕೇಂದ್ರ ಬೀರಪ್ಪಾ ಕುರಿಯವರು ಎಲ್ಲ ದಾನಗಳಂತೆಯೇ ರಕ್ತದಾನವೂ ಶ್ರೇಷ್ಠವಾದುದು. ರಕ್ತದಾನದ ಮೂಲಕ ನಾವು ಮತ್ತೊಂದು ಜೀವಿಯ ಪ್ರಾಣ ರಕ್ಷಣೆಗೆ ಸಹಾಯ ಮಾಡಿದಂತಾಗುತ್ತದೆ. ಬಹಳಷ್ಟು ಜನರಿಗೆ ರಕ್ತದ ಅವಶ್ಯಕತೆಯಿದ್ದು ಇಂತಹ ಶಿಬಿರ ಆಯೋಜಿಸುವ ಮೂಲಕ ಆ ಅವಶ್ಯಕತೆ ಪೂರೈಸಲು ಸಾದ್ಯವಾಗುತ್ತದೆ. ರಕ್ತದಾನ ಮಾಡುವದರಿಂದ ಆರೋಗ್ಯಕ್ಕೆ ಯಾವ ಅಪಾಯವೂ ಇರುವುದಿಲ್ಲ ಎಂದರು.

ಶಿಬಿರದ ಸಂಘಟಕ ಪ್ರಮುಖ ಭಗತ್‌ಸಿಂಗ್ ಯುವ ಬಳಗದ ಅಧ್ಯಕ್ಷ ಸುಧೀರ ಶೆಟ್ಟಿಯವರು ಶಿಬಿರದ ಉದ್ದೇಶದ ಬಗ್ಗೆ ತಿಳಿಸಿ, ಪ್ರತೀವರ್ಷ ರಕ್ತದಾನ ಮಾಡುವ ಮೂಲಕ ತಮ್ಮ ಶಿಬಿರದ ಯಶಸ್ಸಿಗೆ ಸಹಕರಿಸುತ್ತಿರುವರನ್ನು ಸ್ಮರಿಸಿದರು. ವಕೀಲರ ಸಂಘದ ಅಧ್ಯಕ್ಷ ಎಸ್. ಸೋಮಕುಮಾರವರು ಭಗತ್‌ಸಿಂಗ್ ಯುವ ಬಳಗದ ಕ್ರಿಯಾಶೀಲ ಕೆಲಸದವನ್ನು ಶ್ಲಾಗಿಸಿದರು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ನಾಯಕ, ಕಾರ್ಯದರ್ಶಿ ಪ್ರವೀಣ ನಾಯ್ಕ, ರೋಟರಿ ಕ್ಲಬ್‌ನ ಕಾರ್ಯದರ್ಶಿ ಪ್ರಕಾಶ ಕಣಿವೆಹಳ್ಳಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗರತ್ನಾ ಹೆಗಡೆ, ಖಜಾಂಚಿ ಲತಾ ಶೆಟ್ಟಿ, ಲಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಯು.ಎಸ್. ಪಾಟೀಲ, ಬಂಗೂರನಗರ ಪದವಿ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಎಸ್.ಎಸ್. ಹಿರೇಮಠ ಮುಂತಾದವರಿದ್ದರು.
ಶಿಬಿರದಲ್ಲಿ ಮಹಿಳೆಯರೂ ಸೇರಿದಂತೆ ೧೬೫ ಜನರು ರಕ್ತದಾನ ಮಾಡಿದರು.

ಭಗತ್ ಸಿಂಗ್ ಯುವ ಬಳಗದ ಪ್ರವೀಣ ಪರಮಾರ, ಅರ್ಜುನ ಗವಸ್, ಶ್ರೀನಾಥ ಮಿರಾಶಿ, ವಿಜಯ್ ಮಿರಾಶಿ, ಪ್ರಭು ಅರವಟಗಿ, ರಾಜೇಶ ಗುಜ್ಜರ್, ಅಜಯ್ ನಾಯ್ಡು, ಕಿರಣ ಹಿರೇಮಠ, ದ್ಯಾಮಣ್ಣ ಹಾಡಿಕರ ಮುಂತಾದವರು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಭಗತ್‌ಸಿಂಗ್ ಯುವ ಬಳಗದ ಅಧ್ಯಕ್ಷ ಸುಧೀರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*