ಪ್ರಯೋಗಶೀಲ, ಪ್ರತಿಭಾವಂತ ಶಿಕ್ಷಕ ಪಿ.ಆರ್. ನಾಯ್ಕ
ಈ ಮತ್ಸರ ಎನ್ನುವುದು ಪ್ರತಿಯೊಬ್ಬನಿಗೂ ಅಂಟಿದ ಮಹಾಶಾಪ. ತನಗಿಲ್ಲ ತನಗಿಲ್ಲ ಎಂದು ಬಾಯಲ್ಲಿ ಹೇಳಿದರೂ ಅಲ್ಲೆಲ್ಲೋ ನಮ್ಮೊಳಗೆ ಅದು ಅಡಗೇ ಇದೆ. ಎಂತೆಂತಹ ಮೇಧಾವಿಗಳನ್ನೂ, ಖ್ಯಾತ ವ್ಯಕ್ತಿಗಳ ಜೀವನವನ್ನೂ ಹತ್ತಿರದಿಂದ ನೋಡಿದಾಗಲೂ ನನಗೆ ಇದರ ಎಳೆಯೊಂದು ಗೋಚರಿಸದೇ ಇರುವುದಿಲ್ಲ. ಅಧ್ಯಯನ ಮತ್ತು ಅನುಭವ ಇದನ್ನು ಕಡಿಮೆಗೊಳಿಸಬಹುದಾದರೂ ಬುಡಸಮೇತ ಕಿತ್ತೆಸೆಯಲಾರದು. […]