ದಾಂಡೇಲಿ: ಭೂ ಸುಧಾರಣೆ ಕಾಯಿದೆ, ಎ.ಪಿ.ಎಂ.ಸಿ. ಕಾಯಿದೆ, ಕಾರ್ಮಿಕ ಕಾಯಿದೆಗಳ ತಿದ್ದುಪಡಿ ವಿರೋಧಿಸಿ ಕೊರೊನಾ ಬ್ರಷ್ಠಾಚಾರ ಹಾಗೂ ನೆರೆ ಪರಿಸ್ಥಿತಿಯಲ್ಲಿ ನಿರ್ವಹಣೆಯ ವೈಫಲ್ಯ ಸೇರಿದಂತೆ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತೀಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳರವರು ಕೊರೊನಾದಿಂದ ಜನರು ತೊಂದರೆಗೊಳಗಾಗಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸರಕಾರ ಕೋವಿಡ್ ಹೆಸರಲ್ಲಿ ಖರೀದಿಸಿರುವ ಸಾಮಗ್ರಿಗಳಲ್ಲಿ ವ್ಯಾಪಕ ಬೃಷ್ಠಚಾರ ನಡೆಯುತ್ತಿದೆ. ಮಾಸ್ಕ್, ವೆಂಟಿಲೇಟರ್ ಸೇರಿದಂತೆ ಎಲ್ಲ ಖರೀದಿಯಲ್ಲಿ ದುಬಾರಿ ಬೆಲೆ ಹಚ್ಚಲಾಗಿದೆ. ಕೊರಾನಾ ಹೊರತು ಪಡಿಸಿ ಬೇರೆ ಕಾಯಿಲೆಗಳ ಚಿಕಿತ್ಸೆ ದೊರೆಯುವಲ್ಲಿ ಸಮಸ್ಯೆಯಾಗುತ್ತಿದೆ. ಊಳುವವನೇ ಭೂಮಿಯ ಒಡೆಯ ಎಂಬುದು ೧೭೯೪ರಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಭೂ ಸುಧರಣಾ ಕಾಯಿದೆಯಾಗಿತ್ತು. ಆದರೆ ಈಗ ಸುಗ್ರಿವಾಜ್ಞೆಯ ಮೂಲಕ ಸರಕಾರ ಉಳ್ಳವನೇ ಭೂಮಿ ಒಡೆಯ ಎಂಬ ಜನವಿರೋಧಿ ಕಾಯಿದೆ ತರಲು ಹೊರಟಿದೆ. ಕೃಷಿ ಉತ್ಪನ್ನ ಮರಕಟ್ಟೆ ಸಮಿತಿಯ ಕಾಯ್ದೆ ತಿದ್ದುಪಡಿಯಿಂದ ರೈತರ ಶೋಷಣೆಯಾಗುವ ಸಾದ್ಯತೆಯಿದೆ. ಮದ್ಯವರ್ತಿಗಳಿದ ರೈತರ ಮೇಲೆ ದಬ್ಬಾಳಿಕೆ ನಡೆಯುವಂತಾಗುತ್ತದೆ. ಕೈಗಾರಿಕಾ ವಿವಾದಗಳ ಕಾಯ್ದೆಯಿಂದ ಕಾರ್ಮಿಕರ ಶೋಷಣೆಯಾಗಲಿದೆ. ಅಷ್ಟೇ ಅಲ್ಲ ಅತಿವೃಷ್ಠಿ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಟ್ಟಿರುವ ಮನೆ, ನೀಡಿರುವ ಪರಿಹಾರಗಳ ಲೆಕ್ಕ ನೀಡಬೇಕು. ಜನವಿರೊಧಿ ನೀತಿಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ ಶೈಲೇಶ ಪರಮಾನಂದರವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಆದಂ ದೇಸೂರ, ಯಾಸ್ಮಿನ್ ಕಿತ್ತೂರ, ಅಷ್ಪಾಕ ಶೇಖ, ಅನಿಲ್ ನಾಯ್ಕರ, ಮೌಲಾಲಿ ಮುಲ್ಲಾ, ಸರಸ್ವತಿ ರಜಪೂತ, ನೀಲವ್ವ ಬಂಡಿವಡ್ಡರ್, ರುಹಿನಾ ಖತೀಬ್, ರುಕ್ಮಿಣಿ ಬಾಗಡೆ, ಸುಧಾ ರಾಮಲಿಂಗ ಜಾಧವ್, ಸಪೂರಾ ಯರಗಟ್ಟಿ, ಶಿಲ್ಪಾ ಕೋಡೆ, ಪ್ರಮುಖರಾದ ರಾಮಲಿಂಗ್ ಜಾಧವ್, ಎಮ್. ಆರ್. ನಾಯಕ, ಫಿರೋಜ ಶೇಖ, ಅವಿನಾಶ ಘೋಡಕೆ, ವೀರೇಶ ಯರಗಾರಿ, ದಾದಾಪೀರ್ ನದಿಮುಲ್ಲಾ, ವೈ. ಪ್ರಬೂದಾಸ, ಜಾಫರ್ ಮಸನಗಟ್ಟಿ ಮುಂತಾದವರಿದ್ದರು. ಆರಂಭದಲ್ಲಿ ಸೋಮಾನಿ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಸರಕಾರದ ವಿರುದ್ದ ದಿಕ್ಕಾರದ ಘೋಷಣೆ ಹಾಕಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ಜನ್ಮ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ಈ ಪ್ರತಿಭಟನಾ ಕಾರ್ಯಕ್ರವನ್ನು ಜನಧ್ವನಿ ಘೋಷಣೆಯಡಿ ಹಮ್ಮಿಕೊಂಡಿತ್ತು.
Be the first to comment