ದಾಂಡೇಲಿಯ ಜನತೆ ಕಳೆದೆರಡು ದಿನಗಳಿಂದ ಕೊರೊನಾ ಸೋಂಕಿನಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕೆಲ ದಿನಗಳಿಂದ ಎರಡಂಕಿಯಲ್ಲಿ ಹೆಚ್ಚುತ್ತಿದ್ದ ಕೊರೊನಾ ಎರಡು ದಿನಗಳಿಂದ ಒಂದಂಕಿಗಿಳಿದಿರುವುದು ಸಮಾದಾನ ತಂದಿದೆ.
ರವಿವಾರ ನಗರದ 5 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇಲ್ಲಿಯವರೆಗೆ 630 ಜನರು ಸೋಂಕಿಗೊಳಗಾಗುವಂತಾಗಿದೆ.
ಶನಿವಾರದಂದು ಗುಣಮುಖರಾದ 37 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ 470 ಜನರು ಗುಣಮುಖರಾಗಿದ್ದಾರೆ.
Be the first to comment