600 ಕ್ಕೆ 3 ಬಾಕಿ: ದಾಂಡೇಲಿಯಲ್ಲಿ ಬುಧವಾರ ಮತ್ತೆ…

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ 600 ಗಡಿ ಸಮೀಪಿಸಿದೆ.

ದಾಂಡೇಲಿಯಲ್ಲಿ ಬುಧವಾರ ಮತ್ತೆ 14 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇವರನ್ನು ಕೊರೊನಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಬುಧವಾರದ 14 ಪ್ರಕರಣ ಸೇರಿ ದಾಂಡೇಲಿಯಲ್ಲಿ ಇದುವರೆಗೆ 597 ಪಾಸಿಟಿವ್ ಪ್ರಕರಣಗಳಾದಂತಾಗಿದೆ.

ಮಂಗಳವಾರ 26 ಜನರು ಗುಣಮುಖ ಹೊಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಲ್ಲಿಯವರೆಗೆ 428 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)