ಪ್ರಸಕ್ತ ಸಾಲಿನ ಎಸ್.ಎಸ್. ಎಲ್. ಸಿ. ಪರೀಕ್ಷೆಯ ಪಲಿತಾಂಶದಲ್ಲಿ ಅವಿಭಜಿತ ಹಳಿಯಾಳ ತಾಲೂಕಿಗೆ ದಾಂಡೇಲಿಯ ಜನತಾ ವಿದ್ಯಾಲಯ ಇ.ಎಮ್.ಎಸ್. ಪ್ರೌಢ ಶಾಲೆಯ ಖುಶಿ ದಿಲೀಪ ಅಗರವಾಲ 621 (ಶೇ. 99.36) ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಹಳಿಯಾಳ ತಾಲೂಕಿನ ಟಾಪ್ ಟೆನ್ ಸಾಧಕರು
ತಾಲೂಕಿನ ಟಾಪ್ ಟೆನ್ ಯಾದಿಯಲ್ಲಿ 618 ಅಂಕ ಪಡೆದ ಹಳಿಯಾಳ ಕಾರ್ಮೆಲ್ ಪ್ರೌಢ ಶಾಲೆಯ ಪ್ರಜ್ವಲ ಪ್ರಕಾಶ ಶೆಟ್ಟಿ, 615 ಅಂಕ ಪಡೆದ ದಾಂಡೇಲಿ ಜನತಾ ವಿದ್ಯಾಲಯದ ವೈಷ್ಣವಿ ಅರುಣ ಶೆಟ್ಟಿ, 611 ಅಂಕ ಪಡೆದ ಹಳಿಯಾಳ ಮಿಲಾಗ್ರಿಸ್ ಪ್ರೌಢಲೆಯ ಶೀಪಾ ಅಬ್ದುಲ್ ಅಜಿಂ ಅನ್ಸಾರಿ, 608 ಅಂಕ ಪಡೆದ ಹಳಿಯಾಳ ಸ್ವಾಮಿ ವಿವೇಕಾನಂದ ಆಂಗ್ಲ ಪ್ರೌಢಶಾಲೆಯ ಕಾವೇರಿ ಕಲ್ಲಪ್ಪ ಕಮ್ಮಾರ, 608 ಅಂಕ ಪಡೆದ ದಾಂಡೇಲಿಯ ಸೆಂಟ್ ಮೈಕಲ್ ಪ್ರೌಢ ಶಾಲೆಯ ರಿತೇಶ ಪಾಟೀಲ, 605 ಅಂಕ ಪಡೆದ ಹಳಿಯಾಳ ಮಿಲಾಗ್ರಿಸ್ ಪೌಢ ಶಾಲೆಯ ಭೂಮಿಕಾ ಅಶೋಕ ನಾಯಕ, 605 ಅಂಕ ಪಡೆದ ದಾಂಡೇಲಿ ಜನತಾ ವಿದ್ಯಾಲಯದ ಐಶ್ವರ್ಯ ಎಸ್. ಕಾಳೆ, 604 ಅಂಕ ಪಡೆದ ಕಾರ್ಮೆಲ ಪ್ರೌಢ ಶಾಲೆಯ ನಾಗರತ್ನಾ ತಾಲಾಜಿ ಬನೋಶಿ, 603 ಅಂಕ ಪಡೆದ ಯಡೋಗಾ ಸರಕಾರಿ ಪ್ರೌಢ ಶಾಲೆಯ ಲಕ್ಷ್ಮಣ ನಾಗರಾಜ ತೇರಗಾಂವಕರ, 603 ಅಂಕ ಪಡೆದ ಹಳಿಯಾಳ ಕಾರ್ಮೆಲ್ ಪ್ರೌಢ ಶಾಲೆಯ ಸಂಜುಕುಮಾರ ಮಠಪತಿ, 598 ಅಂಕ ಪಡೆದ ಹಳಿಯಳ ಮಿಲಾಗ್ರಿಸ್ ಪ್ರೌಢ ಶಾಲೆಯ ಪ್ರಜ್ವಲಾ ಗಂಗಧರ ಭಜಂತ್ರಿ, 594 ಅಂಕ ಪಡೆದ ಹಳಿಯಾಳ ಮಿಲಾಗ್ರಿಸ್ ಪ್ರೌಢ ಶಾಲೆಯ ಸ್ಮಿತಾ ಮಾನೆ, 594 ಅಂಕ ಪಡೆದ ಸ್ವಾಮಿ ವಿವೇಕಾನಂದ ಆಂಗ್ಲ ಮಾದ್ಯಮ ಶಲೆಯ ಸಂಜನಾ ರವಿಚಂದ್ರ ಸೋಮವಂಶಿ ಸಾನೆ ಮಾಡಿದ್ದಾರೆ.
ತಾಲೂಕಿನಲ್ಲಿ ಉತ್ತಮ ಅಂಕಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ್ ಅಹ್ಮದ್ ಮುಲ್ಲಾ ಶುಭ ಹಾರೈಸಿದ್ದಾರೆ.
ಹಳಿಯಾಳ ತಾಲೂಕಿನ ಗುಣಾತ್ಮಕ ಪಲಿತಾಂಶದ ವಿವರ
ತಾಲೂಕಿನ 9 ಸರಕಾರಿ ಪ್ರೌಢ ಶಾಲೆಗಳು, 2 ಅನುದಾನಿತ ಪ್ರೌಢ ಶಾಲೆಗಳು, 3 ಅನುದಾನ ರಹಿತ ಪ್ರೌಢ ಶಾಲೆಗಳು ಸೇರಿ ಒಟ್ಟೂ 14 ಪ್ರೌಢ ಶಾಲೆಗಳು ಎ ಗ್ರೇಡ್ ನಲ್ಲಿ, 8 ಸರಕಾರಿ ಪೃವಢ ಶಾಲೆಗಳು ಹಾಗೂ ಮೂರು ಅನುದಾನ ರಹಿತ ಪ್ರೌಢ ಶಾಲೆಗಳು ಸೇರಿ 11 ಪ್ರೌಢ ಶಾಲೆಗಳು ಬಿ. ಗ್ರೇಡ್‍ನಲ್ಲಿ, 4 ಸರಕಾರಿ ಪ್ರೌಢ ಶಾಲೆಗಳು, 4 ಅನುದಾನಿತ ಪ್ರೌಢ ಶಾಲೆಗಳು ಹಾಗೂ 4 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟೂ 12 ಪ್ರೌಢ ಶಾಲೆಗಳು ಸಿ. ಗ್ರೇಡ್‍ನಲ್ಲಿ ಗುಣಾತ್ಮಕ ಪಲಿತಾಂಶ ಪಡೆದುಕೊಂಡಿವೆ. ತಾಲೂಕಿನ ಒಟ್ಟೂ ಗುಣಾತ್ಮಕ ಪಲಿತಾಂಶ ‘ಬಿ’ ಗ್ರೇಡ್ ಆಗಿರುತ್ತದೆ
ಇಂತಹ ಸುದ್ದಿಗಳನ್ನು ಪ್ರಕಟಿಸಿ ಎಲ್ಲರೂ ಖುಶಿ ಪಡುವಂತಾಗಲಿ.
Good news sr