ದಾಂಡೇಲಿ: ನಗರದ ಲಯನ್ಸ್ ಕ್ಲಬ್ ಇಂಟರ್ ನ್ಯಾಶನಲ್ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂಯೋಜಿತ ದಾಂಡೇಲಿ ಪ್ರೆಸ್ ಕ್ಲಬ್‍ನವರು ಪತ್ರಿಕಾ ದಿನಾಚರಣೆ ಆಚರಿಸಿದರು.
ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಯು.ಎಸ್. ಪಾಟೀಲರು ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತೀ ವರ್ಷದ ಪತ್ರಿಕಾ ದಿನಾಚರಣೆಯನ್ನು ಒಂದು ವೇದಿಕೆಯ ಕಾರ್ಯಕ್ರಮವನ್ನಾಗಿ ಆಚರಿಸುತ್ತಿದ್ದೆವು. ನಗರದ ಜನರೆಲ್ಲ ಸೇರಿ ಒಂದು ಸಂಭ್ರಮವಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣಕ್ಕೆ ಅದು ಸಾದ್ಯವಾಗಿಲ್ಲ. ಪರಿಸರ ಕೂಡಾ ನಮ್ಮ ಬದುಕಿನ ಭಾಗವಾಗಿರುವುದರಿಂದ ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಈ ವರ್ಷ ಪತ್ರಿಕಾ ದಿನಾಚರಣೆಯನ್ನು ಆಚರಿಸಿದ್ದೇವೆಂದರು.
ಈ ಸಂದರ್ಭದಲ್ಲಿ ಪ್ರೆಸ್‍ಕ್ಲಬ್‍ನ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಖಜಾಂಚಿ ಕೃಷ್ಣಾ ಪಾಟೀಲ, ಸದಸ್ಯರುಗಳಾದ ಬಿ.ಎನ್. ವಾಸರೆ, ಸಂದೇಶ ಜೈನ್, ಅಕ್ಷಯಗಿರಿ ಗೋಸಾವಿ, ಸರ್ಫರಾಜ ಶೇಖ, ಲಯನ್ಸ್ ಕ್ಲಬ್‍ನ ಅಧ್ಯಕ್ಷೆ ಅನ್ನಪೂರ್ಣ ಬ್ಯಾಕೋಡ, ಕಾರ್ಯದರ್ಶಿ ನಾಗರತ್ನ ಹೆಗಡೆ, ಖಜಾಂಚಿ ಲತಾ ಶೆಟ್ಟಿ, ಲಯನ್ ಪ್ರಮುಖರಾದ ಡಾ. ಎನ್.ಜಿ. ಬ್ಯಾಕೋಡ್, ವೈ.ಎನ್. ಮುನವಳ್ಳಿ, ಉದಯ ಶೆಟ್ಟಿ, ಮಹೇಶ ಹಿರೇಮಠ, ವಿನಯ ಭಟ್ಟ, ಗಣೇಶ ಖಾನಾಪುರಿ, ಮಾರುತಿ ಮಾನೆ, ಲಾರೆನ್ಸ್ ಡಿಸೋಜಾ. ವಿ.ಆರ್. ಹೆಗಡೆ, ಪ್ರಣೇಶ ಮುಗಳಿಹಳ, ಸಯ್ಯುದ್ ಇಸ್ಮಾಯಿಲ್ ತಂಗಳ, ಗಣೇಶ ಖಾನಾಪುರಿ, ಮಹಿಮಾ ಖಾನಾಪುರಿ, ಇಮ್ತಿಯಾಜ್ ಅತ್ತಾರ, ಗಜಾನನ ಮುಂತಾದವರಿದ್ದರು. ಎನ್.ವಿ. ಪಾಟೀಲ ನಿರೂಪಿಸಿದರು.
Be the first to comment