ದಾಂಡೇಲಿಯಲ್ಲಿ 500ರ ಸನಿಹದಲ್ಲಿ ಕೊರೊನಾ: ಗುರುವಾರ ಮತ್ತೆ…

ಬುಧವಾರ 12 ಜನರ ಬಿಡುಗಡೆ

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೊಂಕಿತರ ಸಂಖ್ಯೆ 500ರ ಸನಿಹಕ್ಕೆ ತಲುಪುತ್ತಿದೆ.

ಗುರುವಾರ ಮತ್ತೆ 36 ಜನರಲ್ಲಿ ಸೋಂಕು ದೃಢವಾಗಿದ್ದು ಇಲ್ಲಿಯವರೆಗೆ 495 ಜನರು ಸೊಂಕಿಗೊಳಗಾದಂತಾಗಿದೆ. ಇವರಲ್ಲಿ ಬುಧವಾರ 12 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ ಒಟ್ಟೂ 282 ಜನರು ಗುಣಮುಖರಾಗಿದ್ದಾರೆ.

ಗುರುವಾರದ ವರದಿಯಲ್ಲಿ 125 ಜನರ ರ್ಯಾಪಿಡ್ ಪರೀಕ್ಷೆ ಮಾಡಲಾಗಿದ್ದು ಅವರಲ್ಲಿ 36 ಜನರಲ್ಲಿ ಪಾಸಿಟಿವ್ ಬಂದಿರುತ್ತದೆ. ಇವರೆಲ್ಲರೂ ಕಾಗದ ಕಂಪನಿಯ ಕ್ವಾಟ್ರಸ್, ಟೌನ್ ಶಿಪ್, ಹಳಿಯಾಳ ರಸ್ತೆ, ಹಳೆದಾಂಡೇಲಿ ಸೇರಿದಂತೆ ವಿವಿಧ ಭಾಗದವರಾಗಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*