ದಾಂಡೇಲಿಯಲ್ಲಿ ಮಂಗಳವಾರ ಮತ್ಯೆ 31 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇವರನ್ನು ಕೊರೊನಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.
ಮಂಗಳವಾರದ 31 ಪ್ರಕರಣವೂ ಸೇರಿ ದಾಂಡೇಲಿಯಲ್ಲಿ 425 ಜನರು ಕೊರೊನಾ ಸೋಂಕಿಗೊಳಗಾದಂತಾಗಿದೆ. ಇವರಲ್ಲಿ ಸೋಮವಾರ 18 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟೂ 425 ಸೋಂಕಿತರಲ್ಲಿ ಸೋಮವಾರದವರೆಗೆ 272 ಜನರು ಗುಣಮುಖರಾಗಿದ್ದಾರೆ.
ಮಂಗಳವಾರದ ಸೋಂಕಿತರಲ್ಲಿ ಟೌನ್ ಶಿಪ್, ಬಂಗೂರನಗರ ಕಾಗದ ಕಂಪನಿ ಕ್ವಾಟ್ರಸ್ , ಹಳೆದಾಂಡೇಲಿ, ಮಾರುತಿನಗರ, ಕೋಗಿಲಬನ’, ಮಿರಾಶಿಗಲ್ಲಿ, ಬಾಂಬೇಚಾಳ, ಸುಧರ್ಶನ ನಗರ, ಗಣೇಶನಗರ ಸೇರಿದಂತೆ ವಿವಿದೆಡೆಯ ಜನರು ಸೋಂಕಿಗೊಳಗಾಗಿದ್ದಾರೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸುಮಾರು 200 ಜನರ ಪರೀಕ್ಷೆಯಲ್ಲಿ 30 ಜನರಲ್ಲಿ ಪಾಸಿಟಿವ್ ಬಂದಿದೆ.
Be the first to comment