ಕೊರೊನಾ ಸೋಂಕು ಹರಡದಂತೆ ಮುಂಜಾಗೃತೆ ವಹಿಸುವ ನಿಟ್ಟಿನಲ್ಲಿ ದಾಂಡೇಲಿ ರೋಟರಿ ಕ್ಲಬ್‍ನವರು ನಗರದ ಮಾರ್ಕೆಟ್‍ನಲ್ಲಿಯ ವ್ಯಾಪಾರಸ್ಥರು ರವಿವಾರದ ಸಂತೆಗೆ ಬಂದ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.
ತಹಶೀಲ್ದಾರ್ ಶೈಲೇಶ ಪಾರಮಾನಂದರವರು ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈಸಂದರ್ಭದಲ್ಲಿ ಮಾತನಾಡಿದ ಅವರು ಇದು ಪರಿಣಾಮಕಾರಿಯಾದ ಕಾರ್ಯಕ್ರಮ, ಸಾರ್ವಜನಿಕರು ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಧರಿಸುವ ಮಹತ್ವದ ಬಗ್ಗೆ ಅರಿತುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮಾತನಾಡಿದÀ ರೋಟರಿ ಕ್ಲಬ್‍ನ ಪ್ರಮುಖರಾದ ಡಾ. ಮೋಹನ ಪಾಟೀಲ ಇದು ನಮ್ಮ ಸಾಮಾಜಿಕ ಕಳಕಳಿಯ ಕಾರ್ಯವಾಗಿದೆ. ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕಕ ಧರಿಸಬೇಕು. ಸಾಮಾಜಿಕ ಅಂತರ ಪಾಲಿಸಬೇಕೆಂಬುವುದೇ ನಮ್ಮ ಈ ಕಾರ್ಯದ ಕಕಳಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಉಪಾದ್ಯಕ್ಷ ಗಣೇಶ ಕಾಮತ್, ಕಾರ್ಯದರ್ಶಿ ಪ್ರಕಾಶ ಕಣಿವೆಹಳ್ಳಿ, ಖಜಾಂಚಿ ಸುಧಾಕರ ಶೆಟ್ಟಿ, ಪ್ರಮುಖರಾದ ಡಾ. ಹರಿಲಾಲ ಮೆರ್ವಾಡೆ, ಡಾ. ಎಸ್.ಎಲ್. ಕರ್ಕಿ, ರಾಜೇಶ ತಿವಾರಿ, ಅರುಣ ನಾಯಕ, ಆರ್.ಪಿ. ನಾಯ್ಕ, ರವಿ ನಾಯಕ, ನಾಗೇಶ ನಾಯ್ಕವಾಡಿ ಸೋಮಕುಮಾರ, ಎಸ್. ಜಿ.ಇ. ಉಮೇಶ, ನವೀನ ಕಾಮತ್, ರಾಹುಲ ಬಾವಾಜಿ, ದೀಪಕ ಬಂಡಿಗೆ, ದೀಪಕ ನಾಯಕ, ಪುರುಷೋತ್ತಮ ಮಲ್ಯ, ರಾಜೇಶ ವೆರ್ಣೇಕರ, ಶೇಖರ ಪೂಜಾರಿ, ಮುಂತಾದವರಿದ್ದರು.
Be the first to comment