ಕೊರೊನಾ ಸೋಂಕಿಗೊಳಗಾಗಿ ದಾಂಡೇಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 38 ಜನರನ್ನು ಶನಿವಾರ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ.
ಚಿಕಿತ್ಸೆಯ ನಂತರ 38 ಸೋಂಕಿತರ ಗಂಟಲು ದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಗುಣಮುಖರಾದ ಇವರನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ ಮಾಡಿ ಕಳಿಸಲಾಗಿದೆ.
ದಾಂಡೇಲಿಯಲ್ಲಿ ಶನಿವಾರ 8 ಜನರಲ್ಲಿ ಪಾಸಿಟಿವ್ ಬಂದಿರುವುದೂ ಸೇರಿ ಇಲ್ಲಿಯವರೆಗೆ 374 ಜನರು ಸೋಂಕಿಗೊಳಗಾಗಿದ್ದು, ಶನಿವಾರ ಬಿಡುಗಡೆಯಾದ 38 ಜನರೂ ಸೇರಿ ಇಲ್ಲಿಯವರೆಗೆ 228 ಜನರು ಗುಣಮುಖರಾಗಿ ಮನೆ ಸೇರಿದಂತಾಗಿದೆ. ಉಳಿದವರು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಹಶೀಲ್ದಾರ ಶೈಲೇಶ ಪರಮಾನಂದ ತಿಳಿಸಿದ್ದಾರೆ.
Be the first to comment