ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಶುಕ್ರವಾರ ಮತ್ತೆ ತನ್ನ ವಿರಾಟ ರೂಪ ತೋರಿಸಿದ್ದು, ಶುಕ್ರವಾರ ಒಂದೇ ದಿನದ ವರದಿಯಲ್ಲಿ 45 ಜನರಲ್ಲಿ ಪಾಸಿಟಿವ್ ಬಂದಿರುವ ವರದಿಯಾಗಿದೆ.
ಇದರಿಂದ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 366ಕ್ಕೆ ಏರಿಕೆಯಾದಂತಾಗಿದೆ. ಸುಭಾಶನಗರ, ಕಾಗದ ಕಂಪನಿ ಕ್ವಾಟ್ರಸ್, ಮಾರುತಿ ನಗರ, ಹಳೆದಾಂಡೇಲಿ, ಥರ್ಡ್ ನಂಬರ ಗೇಟ್, ಮಾರುತಿನಗರ, ಜೆ.ಎನ್. ರೋಡ, ವಿನಾಯಕ ನಗರ ಸೇರಿದಂತೆ ವಿವಿದೆಡೆಯ ಜನರು ಒಳಗೊಂಡಿದ್ದಾರೆ.
ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದ ದಾಂಡೇಲಿ ತತ್ತರಿಸುತ್ತಿದೆ. ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಜನ ಆತಂಕಕ್ಕೊಳಗಾಗುತ್ತಿದ್ದಾರೆ.
Be the first to comment