ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ 120 ಜನರಲ್ಲಿ ಸೋಂಕು ದೃಢವಾಗಿದ್ದು, ಇಲ್ಲಿಯವರೆಗಿನ ಜಿಲ್ಲೆಯ ಸೋಂಕಿತರ ಸಂಖ್ಯೆ 2027 ರಷ್ಟಾಗಿದೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟೂ 2,027 ಜನರಲ್ಲಿ ಸೋಂಕು ದೃಢವಾಗಿದ್ದು, ಅವರಲ್ಲಿ 1268 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಉಳಿದ 650ಕ್ಕೂ ಹೆಚ್ಚು ಜನರಿಗೆ ಜಿಲ್ಲೆಯ ವಿವಿಧ ಕೋವಿಡ್ ಕೇರ್ ಸೆಂಟ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 70 ರಷ್ಟು ಜನ ಹೋಮ್ ಐಸುಲೇಶನಲ್ಲಿದ್ದಾರೆ. ಈವರೆಗೆ ಕೊರೊನಾ ದಿಂದಾಗಿ ಜಿಲ್ಲೆಯಲ್ಲಿ 22 ಜನರು ಸಾವನ್ನಪ್ಪಿರುವರೆಂದು ದಾಖಲಾಗಿದೆ.
Be the first to comment