ದಾಂಡೇಲಿಯಲ್ಲಿ ಬುಧವಾರ ಮತ್ತೆ 12 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ದಾಂಡೇಲಿಯಲ್ಲಿ ಕೊರೊನಾ ತ್ರಿಶತಕ ಬಾರಿಸಿದಂತಾಗಿದೆ.
ದಾಂಡೇಲಿಯಲ್ಲಿ ಮಂಗಳವಾರ ಒಂದಿಷ್ಟು ಕೊರೊನಾ ಕಡಿಮೆಯಾತೆಂಬ ನೆಮ್ಮದಿಯಾಗಿತ್ತಾದರೂ, ಬುಧವಾರ ಮತ್ತೆ 12 ಕ್ಕೆ ಏರಿಕೆಯಾಗಿದೆ. ಇದೂ ಸೇರಿ ಇಲ್ಲಿಯವರೆಗೆ 301 ಜನರಲ್ಲಿ ಸೋಂಕು ದೃಢವಾದಂತಾಗಿದೆ.
ಒಟ್ಟೂ 301 ಸೋಂಕಿತರಲ್ಲಿ 181 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.
Be the first to comment