ದಾಂಡೇಲಿ: ಮಹಾಮಾರಿ ಕೊರೊನಾ ಗುಣಪಡಿಸಲು ಆಯುರ್ವೇದ ಚಿಕಿತ್ಸೆ ಬಳಸುವ ಬಗ್ಗೆ ಹಾಗೂ ಆಯುರ್ವೇದ ಔಷಧಿ ನೀಡುವ ಬಗ್ಗೆ ಸಮ್ಮತಿ ನೀಡಬೆಕೆಂದು ಒತ್ತಾಯಿಸಿ ದಾಂಡೇಲಿ ಭಾ.ಜ.ಪ. ಯುವ ಮೋರ್ಚಾದವರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ಧಾರೆ.
ನಮ್ಮ ರಾಜ್ಯದವರೇ ಆಗಿರುವ ಬೆಂಗಳುರಿನ ಆಯುರ್ವೇದ ತಜ್ಞ ಡಾ. ಗಿರಿಧರ ಕಡೆಯವರು ಕೊರೊನಾ ಗುಣಪಡಿಸಲು ಆಯುರ್ವೇದದಿಂದ ಸಾದ್ಯವೆಂದು ಆರಂಭದಿಂದಲೂ ತಮ್ಮ ಗಮನಕ್ಕೆ ತರುತ್ತಿದ್ದಾರೆ. ಪ್ರಧಾನ ಮಂತ್ರಿಗಳಿಗೂ ಈ ಬಗ್ಗೆ ಮನವಿ ಮಾಡಿದ್ದಾರೆ. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ 10 ರೋಗಿಗಳನ್ನು ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಗುಣಪಡಿಸಿರುತ್ತಾರೆ. ಇದನ್ನು ಆರೋಗ್ಯ ಸಚಿವರೇ ಬಹಿರಂಗ ಪಡಿಸಿದ್ದಾರೆ. ಕೋವಿಡ್ ಟಾಸ್ಕ್ ಪೋರ್ಸ ಸಭೆಯಲ್ಲಿಯೂ ಈವಿಷಯ ಇಡುವುದಾಗಿ ಹೇಳಿ ತಿಂಗಳು ಕಳೆದಿದೆ
ಯೋಗ ಮತ್ತು ಆಯುರ್ವೇದ ಇದು ನಮ್ಮ ದೇಶದ ಪ್ರಾಚೀನ ಕಾಲದಿಂದಳು ನಡೆದುಕೊಂಡು ಬಂದಿರುವ ಚಿಕಿತ್ಸಾ ಪದ್ದತಿಯಾಗಿದೆ. ಇದಕ್ಕೆ ಅವಕಾಶ ನೀಡುವುದು ಈ ಪದ್ದತಿಯ ಬಗ್ಗೆ ನಮಬಿಕೆಯಿಟ್ಟಿರುವ ಭಾ.ಜ.¥.Àದ ಆದ್ಯ ಕರ್ತವ್ಯ ಕೂಡಾ ಆಗಿದೆ. ಆಯುರ್ವೇದ ಚಿಕಿತ್ಸೆಯಿಂದ ಸರಕಾರಕ್ಕಾಗುವ ಸಾವಿರಾರು ಕೋಟಿ ರೂ.ಗಳ ನಷ್ಠ ತಡೆಯಬಹುದು. ಹಾಗಾಗಿ ಡಾ. ಗಿರಿರಾಜ ಕಡೆಯವರ ಆಯುರ್ವೇದ ಚಿಕಿತ್ಸೆಗೆ ಅವಕಶ ನೀಡಿ, ಅದು ಜನ ಸಾಮಾನ್ಯರಿಗೂ ಸಿಗುವ ಹಾಗೆ ವ್ಯವಸ್ಥೆ ಮಾಡಿಕೊಡಬೇP್ಯಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಭಾ.ಜ.ಪ ಯುವ ಮೋರ್ಚಾ ಅಧ್ಯಕ್ಷ ಈರಯ್ಯ ಸಾಲಿಮಠ, ಭಾ.ಜ.ಪ. ಅಧ್ಯಕ್ಷ ಚಂದ್ರಕಾತ ಕ್ಷೀರಸಾಗರ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ನಗರ ಪ್ರಧನ ಕಾರ್ಯದರ್ಶಿ ಗುರು ಮಠಪತಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಧೀರ ಶೆಟ್ಟಿ, ನಗರಸಭಾ ಸದಸ್ಯ ಬುದ್ದಿವಂತಗೌಡ ಪಾಟೀಲ, ವಿಷ್ಣು ವಾಜ್ವೆ ಪ್ರಮುಖರಾದ ಸುಧಾಕರ ರೆಡ್ಡಿ ಮುಂತಾದವರಿದ್ದರು.
Be the first to comment