ದಾಂಡೇಲಿಯಲ್ಲಿ ಸೋಮವಾರ ಮತ್ತೆ ಹೆಚ್ಚಿದ ಕೊರೊನಾ: 28ರ ಜೊತೆ ಮತ್ತೆ 19 ಪ್ರಕರಣ

ಸೋಮವಾರ 47 ಜನರಲ್ಲಿ ದ್ರಢವಾದ ಸೋಂಕು

ದಾಂಡೇಲಿಯಲ್ಲಿ ಸೋಮವಾರ ಮಹಾಮಾರಿ ಕೊರೊನಾ ರಣಕೇಕೆ ಹಾಕಿದ್ದು, ಒಟ್ಟೂ 47 ಜನರಲ್ಲಿ ಸೋಂಕು ದೃಢವಾಗಿದೆ. ಇದರಿಂದ ಒಟ್ಟೂ ಸೋಂಕಿತರ ಸಂಖ್ಯೆ 154 ರ ಗಡಿದಾಟಿದಂತಾಗಿದೆ.

ಸೋಮವಾರದ ಮುಂಜಾನೆ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಪಾಸಿಟಿವ್ ಪ್ರಕರಣಗಳಾಗುರುವ ವರದಿಯಾಗಿತ್ತು. ಇದು ರವಿವಾರ ರಾತ್ರಿ ಬಂದ ಪರೀಕ್ಷಾ ವರದಿ ಎನ್ನಲಾಗಿದೆ. ಸೋಮವಾರ ಮದ್ಯಾಹ್ನದ ಹೊತ್ತಿಗೆ ಮತ್ತೆ 19 ಪಾಸಿಟಿವ್ ಪ್ರಕರಣಗಳು ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ಸೋಮವಾರ ದಾಂಡೇಲಿಯ ಒಟ್ಟೂ 47 ಜನರಲ್ಲಿ ಕೊರೊನಾ ಸೋಂಕು ದೃಢವಾದಂತಾಗಿದೆ.

ಸೋಮವಾರದ ಈ ಸಂಖ್ಯೆ ದಾಂಡೇಲಿಗರನ್ನು ಬೆಚ್ಚಿ ಬೀಳಿಸಿದೆ. ಇಂದಿನ ವರದಿಯಲ್ಲು ಈ ಸೋಂಕು ಭಾಗಶಹ ನಗರದ ಎಲ್ಲ ಪ್ರದೇಶವನ್ನಾಚರಿಸಿದೆ. ಉದ್ಯಮ ನಗರದಲ್ಲಿ ಕೊರೊನಾ ರಣಕೇಕೆಯ ಬಗ್ಗೆ ಜನರು ಭಯಬೀತಗೊಳ್ಳುತ್ತಿದ್ದಾರೆ. ಆಡಳಿತ ವ್ಯವಸ್ಥೆ ಈ ಸೋಂಕನ್ನು ನಿಯಂತ್ರಿಸುವಲ್ಲಿ ಪ್ರಾಮಾಣಿಕವಾಗಿ ಅವರ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರೂ, ಅದನ್ನೂ ಮೀರಿ ಸೋಂಕಿನ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

3 Comments

  1. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ನಾವು ಸ್ವಾಗತ ಮಾಡುತ್ತೆವೆ ದಾಂಡೇಲಿಯ covide 19 ಮಾಹಿತಿ ಬಗ್ಗೆ ಪ್ರತ್ಯೇಕವಾಗಿ ನೀಡಬೇಕು ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ಹನ್ನೆರಡು ತಾಲ್ಲೂಕುಗಳು ಇವೆ ಆದ್ದರಿಂದ ದಾಂಡೇಲಿಯನ್ನು ಪ್ರತ್ಯೇಕವಾಗಿ ವಿಂಗಡಿಸಿ covide 19 ವರದಿ ನೀಡಬೇಕು ಎಂದು ನಾವು ಕೊರುತೈವೆ

  2. Sir the lessons which is broadcasting in D D chandan for high school children is taught in kannada language. English medium students are facing difficult to follow it. Please raise voice to the concern department

Leave a Reply

Your email address will not be published.


*