ದಾಂಡೇಲಿಯಲ್ಲಿ ಭಾನುವಾರ ಒಂದೂ ಪೊಸಿಟಿವ್ ಪ್ರಕರಣಗಳಿಲ್ಲದೇ ವಿಶ್ರಾಂತಿ ಪಡೆದಿದ್ದ ಕೊರೊನಾ ಸೋಮವಾರ ಮತ್ತೆ ತನ್ನ ವಿರಾಟ ರೂಪ ತೋರಿಸಿದೆ.
ಒಡನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸೋಮವಾರದ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಜನರಲ್ಲಿ ಕೊರೊನಾ ಸೋಂಕು ದ್ರಢವಾಗಿದೆ. ಇವರಲ್ಲಿ ಕಾಗದ ಕಂಪನಿಯೊಳಗಡೆ ವಸತಿ ಗೃಹದಲ್ಲಿರುವ ಮೂವರು, ಕಿತ್ತೂರ ಚೆನ್ನಮ್ಮ ವೃತ್ತದ ಬಳಿ ನಾಲ್ವರು ಸೇರಿದಂತೆ ಟೌನ್ ಶಿಪ್, ಮಾರುತಿ ನಗರ ಸೇರಿದಂತೆ ನಗರದ ವಿವಿದೆಡೆಯ ಜನರಲ್ಲಿ ಪಾಸಿಟಿವ್ ಬಂದಿರುವ ಮಾಹಿತಿಯಿದೆ.
ಇದರಿಂದಾಗಿ ದಾಂಡೇಲಿಯಲ್ಲಿ ಇಲ್ಲಿಯವರೆಗೆ 135 ಜನರಲ್ಲಿ ಕೊರೊನಾ ಸೋಂಕು ದಾಖಲಾದಂತಾಗಿದೆ. ಸೋಮವಾರ ಮದ್ಯಾಹ್ನದ ನಂತರದ ಬುಲೆಟಿನ್ ನಲ್ಲಿ ಪ್ರಕರಣ ಹೆಚ್ಚಾಗಲಿದೆಯೇ ನೋಡಬೇಕಿದೆ.
Be the first to comment