ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪಡಿತರ ವಿತರಕರಾದ ನಮಗೂ ಕೂಡಾ ಭಯ ಹೆಚ್ಚಾಗುತ್ತಿದೆ. ಕಾರಣ ಥಂಬ್ ಹಾಗೂ ಓಟಿಪಿ ವ್ಯವಸ್ಥೆಯ ಬದಲು ಮ್ಯಾನ್ಯವೆಲ್ ಕ್ರಮದಲ್ಲಿ ಪಡಿತರ ವಿತರಿಸಲು ಅವಕಾಶ ಮಾಡಿಕೊಡುವಂತೆ ದಾಂಡೇಲಿಯ ನ್ಯಾಯಬೆಲೆ ಅಂಗಡಿಕಾರರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ದಾಂಡೇಲಿ ತಹಶಿಲ್ದಾರ ಮೂಲಕ ಮನವಿ ರವಾನಿಸಿರುವ ನ್ಯಾಯಬೆಲೆ ಅಂಗಡಿಕಾರರು ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85ನ್ನು ದಾಟಿದೆ. ಬಹಳಷ್ಟು ಜನ ಕ್ವಾರೆಂಟೈನಲ್ಲಿದ್ದಾರೆ. ಇದರಿಂದಾಗಿ ಪಡಿತರ ವಿತರಣೆಯನ್ನು ಥಂಬ್ ಹಾಗೂ ಓಟಿಪಿ ಮೂಲಕ ವಿತರಿಸುವುದು ಕಷ್ಟಟಕರವಾಗುತ್ತಿದೆ. ಕೆಲವರಿಗೆ ಮೊಬೈಲ್ ಬಳಸಲು ಬಾರದ ಕಾರಣ ಮೊಬೈಲನ್ನು ನಾವೇ ಪಡೆದು ಓಟಿಪಿ ಪರಿಶೀಲಿಸಬೆಕಾಗುತ್ತದೆ. ಇದರಿಂದ ಕೊರೊನಾ ತಗಲುವ ಸಾದ್ಯತೆಯಿರುತ್ತದೆ. ಹಾಗಾಗಿ ಥಂಬ್ ಹಾಗೂ ಓಟಿಪಿ ಕ್ರಮದ ಮೂಲಕ ಪಡಿತರ ನೀಡುವುದನ್ನು ರದ್ದು ಪಡಿಸಿ ಮ್ಯಾನ್ಯವಲ್ ಆಗಿ ಪಡಿತರ ನೀಡಲು ಅವಕಾಶ ಮಡಿಕೊಡಬೆಕೆಂದು ಮನವಿ ಮಾಡಿದ್ದಾರೆ.
ತಹಶೀಲ್ದಾರ ಕಾರ್ಯಾಲಯದ ಗೌಡೆಪ್ಪ ಬನಕದಿನ್ನಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಕಾರರ ಸಂಘದ ತಾಲೂಕಾಧ್ಯಕ್ಷ ಮೋಹನ ಹಲವಾಯಿ, ಎನ್.ಆರ್. ನಿಂಬೆನ್ನವರ, ಬಸಪ್ಪ ಶಾಬೋದಿ ಮುಂತಾದವರಿದ್ದರು.
Be the first to comment