ದಾಂಡೇಲಿ: ಲಾಕ್‍ಡೌನ್ ಇದು ಕೊರೊನಾ ನಿಯಂತ್ರಣಕ್ಕೆ ಶಾಶ್ವತವಾದ ಪರಿಹಾರವಲ್ಲ. ಆದರೆ ಲಾಕ್ಆ ಡೌನ್ ಆಗುವುದರಿಂದ ಸೋಂಕಿನಲ್ಲಿ ನಿಯಂತ್ರಣವಾಗುವ ಸಾದ್ಯತೆಯಿರುತ್ತದೆ. ಸ್ವಯಂ ಲಾಕ್‍ಡೌನ್ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಲಾಕ್‌ಡೌನ್ ಶಾಂತಿಯುತವಾಗಿರಲಿ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು.
ದಾಂಡೇಲಿಯ ಇಡೀದಿನದ ಸ್ವಯಂ ಪ್ರೇರಿತ ಲಾಕ್‍ಡೌನ್ ಕುರಿತಾಗಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಜಿಲ್ಲೆಯ ಹಲವೆಡೆ ಸ್ವಯಂ ಪ್ರೇರಣೆಯಿಂದ ಅರ್ಧ ದಿನದ ಲಾಕ್‍ಡೌನ್ ನಡೆಯುತ್ತಿದೆ. ದಾಂಡೇಲಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಗಮನದಲ್ಲಿಟ್ಟುಕೊಂಡು ಸ್ಥಳೀಯರೇ ಇಡೀದಿನದ ಲಾಕ್‍ಡೌನ್ ಮಾಡುವ ನಿರ್ದಾರಕ್ಕೆ ಬಂದಿದ್ದಾರೆ. ಖುಶಿಯ ವಿಚಾರ ವಿಚಾರಕ್ಕೆ ನಮ್ಮ ವಿರೋಧವಂತೂ ಇಲ್ಲ. ನಗರದ ಕಾಳಜಿಯ ದೃಷ್ಠಿಯಿಂದ ಜನರೇ ಮುಂದೆ ಬಂದು ಮಾಡುವ ಲಾಕ್‍ಡೌನ್‍ಗೆ ನಮ್ಮ ಸಹಕಾರವಂತೂ ಇದ್ದೇ ಇದೆ. ಆದರೆ ಸರಕಾರ ಅಥವಾ, ಆಡಳಿತ ಇದನ್ನು ಮುಂದೆ ನಿಂತು ಮಾಡುವುದಿಲ್ಲ. ಆಡಳಿತದಿಂದ ದಿನಸಿ, ತರಕಾರಿಗಳ ವಿತರಣೆಯಿರುವುದಿಲ್ಲ. ಜೀವನಾವಶ್ಯಕ ವಸ್ತು ಹಾಗೂ ಔಷಧಿಗಳಿಗೆ ಸಮಸ್ಯೆ ಮಾಡುವ ಹಾಗಿಲ್ಲ, ಶಾಂತಿಯುತವಾಗಿ ನಡೆಸಬೇಕೆಂದಿದ್ದಾರೆ.
Be the first to comment