ಪತಂಜಲಿಗೆ ಬಂದಿದೆ ಕೊರೊನಾ ‘ಯೋಗ’

ಹಿಂದೆಲ್ಲಾ ಪತಂಜಲಿ ಔಷಧಿಗಳೆಂದರೆ ಅಷ್ಟಕಷ್ಟೇ ಆಗಿತ್ತು. ಅದನ್ನು ಬಳಸುವವರು ಸೀಮಿತವಾಗಿದ್ದರು. ಕೆಲವರು ಪತಂಜಲಿ ಎಂದರೆ ಮೂಗು ಮುರಿಯುತ್ತಿದ್ದರು. ಒಂದು ನಗರದಲ್ಲಿ ಒಂದೋ ಎರಡೋ ಪತಂಜಲಿ ಮಳಿಗೆಗಳಿದ್ದರೂ ವ್ಯಾಪಾರ ಅಷ್ಟಕಷ್ಟೆ ಆಗಿತ್ತು. ಆದರೆ ಈಗ ಹಾಗಿಲ್ಲ. ಕೊರೊನಾ ಕಾರಣಕ್ಕೆ ಜನ ಅದ್ಯಾಕೋ ಪತಂಜಲಿ ಹಾಗೂ ಮನೆ ಔಷಧಿಯತ್ತ ಹೆಚ್ಚಿನ ಆಸಕ್ತಿ ತಳೆಯುತ್ತಿದ್ದಾರೆ.

ಕೊರೊನಾ ವಾರಿಯರ್ಸಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಇತರೆ ಸಿಬ್ಬಂದಿಗಳಿಗೂ ಸಹ ಸರಕಾರ ಹಿಚ್ಚಿನದಾಗಿ ಈ ಪತಂಜಲಿಯಲ್ಲಿ ಸಿಗುವ ಎರಡು ಮೂರು ಔಷಧಿಗಳನ್ನೇ ನೀಡಿದೆಯಂತೆ. ಈವರೆಗೂ ಕೊರೊನಾಗೆ ನಿಶ್ಚಿತವಾದ ಔಷಧಿ ಬಾರದಿರುವ ಹಿನ್ನೆಲೆಯಲ್ಲಿ ನಮ್ಮೊಳಗಿನ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ ಎಂಭ ಕಾರಣಕ್ಕಾಗಿ ಪತಂಜಲಿ ಔಷಧಿಗಳತ್ತ, ಮನೆ ಮದ್ದುಗಳತ್ತ, ಆಯುರ್ವೇದ ಔಷಧಿಗಳತ್ತಲೇ ಜನ ಹೆಚ್ಚೆಚ್ಚು ಆಸಕ್ತಿ ತೋರುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿಯೂ ಇದರ ಪ್ರಚಾರವೇ ಜೋರಾಗಿದೆ. ಆ ಕಾರಣಕ್ಕಾಗಿಯೋ ಏನೋ ಕೆಲ ದಿನಗಳಿಂದ ಪತಂಜಲಿ ಮಳಿಗೆಗಳ ಎದುರು ಜನ ಸಾಲು ಹಾಕುತ್ತಿದ್ದಾರೆ. ಇದು ಪತಂಜಲಿಯ ‘ಯೋಗ’ ಎನ್ನಬಹುದು.


About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*