ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ : ದಾಂಡೇಲಿಯಲ್ಲಿಯೇ ‘ಕೋವಿಡ್ ಕೇರ್ ಸೆಂಟರ್’ ಆರಂಭ

ಮೂರು ದಿನಗಳಲ್ಲಿಯೇ ಸಿದ್ದವಾದ ಕೊರೊನಾ ವಾರ್ಡ

ದಾಂಡೇಲಿ: ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದಾಗಿ ದಾಂಡೇಲಿಯಲ್ಲಿಯೇ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು, ಇದು ಕೇವಲ ಮೂರು ದಿನಗಳಲ್ಲಿ ಸಕಲ ವ್ಯವಸ್ಥೆಗಳೊಂದಿಗೆ ಸಿದ್ದವಾಗಿರುವುದು ವಿಶೇಷವಾಗಿದೆ.

ನಗರದಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ಸಮೀಪಿಸುತ್ತಿದೆ. ಆರಂಭದಲ್ಲಿ ದಾಂಡೇಲಿಯ ಸೋಂಕಿತರನ್ನು ಕಾರವಾರ ಕ್ರಿಮ್ಸ್‍ಗೆ ಸಾಗಿಸಲಾಗುತ್ತಿತ್ತು. ಕಳೆದವಾರದಿಂದ ಹಳಿಯಾಳ ಕೋವಿಡ್ ಕೇರ್ ಸೆಂಟರ್ ಕಳುಹಿಸಲಾಗುತ್ತಿದ್ದು. ಇದೀಗ ಇನ್ನು ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಗರದ ಮುರಾರ್ಜಿ ಬಾಲಕರ ವಸತಿ ಶಾಲೆಯ ನೂತನ ಕಟ್ಟಡದಲ್ಲಿಯೇ ಕೊರೊನಾ ಕೇರ್ ಸೆಂಟರ್ ಗುರುವಾರ ಸಂಜೆಯಿಂದಲೇ ಆರಂಭಿಸಲಾಗಿದೆ. ಇಲ್ಲಿ ಸದ್ಯ 75 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು ಇದರಲ್ಲಿ 35 ಬೆಡ್‍ಗಳನ್ನು ಜಿಲ್ಲಾಡಳಿತ ನೀಡಿದೆ. ಉಳಿದಿದ್ದನ್ನು ಸ್ಥಳಿಯವಾಗಿ ವ್ಯವಸ್ಥೆ ಮಾಡಲಾಗಿದೆ. ಅವಶ್ಯಕತೆ ಬಿದ್ದಲ್ಲಿ ಇನ್ನೂ 150 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‍ನ್ನು ಪ್ರಾಂಭಿಸುವ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಹಶಿಲ್ದಾರ ಶೈಲೇಶ ಪರಮಾನಂದ ತಿಳಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ದಾಂಡೇಲಿಯಲಿ ಕೋವಿಡ್ ಕೇರ್ ಸೆಂಟರ್ ಮಾಡಲು ಜಿಲ್ಲಾಡಳಿತ ನಿರ್ದೇಶನ ನೀಡಿತ್ತು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ್ ನಾಯಕರೂ ಆಗಮಿಸಿ ಸ್ಥಳ ಪರಿಶಿಲಿಸಿದ್ದರು. ಕಾರ್ಯಪ್ರವೃತ್ತರಾದ ಸ್ಥಳೀಯ ತಹಶೀಲ್ದಾರರು ಪೌರಾಯುಕ್ತರು ಹಾಗೂ ಆರೋಗ್ಯಾಧಿಕಾರಿಗಳ ಸಹಕಾರದಲ್ಲಿ ಕೇವಲ ಮೂರು ದಿನದಲ್ಲಿ ಈ ಕೇಂದ್ರವನ್ನು ಸಿದ್ದಪಡಿಸಿದ್ದಾರೆ. ಇಲ್ಲಿ ಈಗಾಗಲೇ ಬಿಸಿ ನೀರು ಕಾಯಿಸಲು ವ್ಯವಸ್ಥೆ, ಸರಕಾರದ ನಿಯಮಾವಳಿಯಂತೆ ಊಟದ ವ್ಯವಸ್ಥೆ, ಊಟ ಪಡೆಯಲು ವೀಶೇಷ ರ್ಯಾಕ್ ವ್ಯವಸ್ಥೆ, ವಾಶಿಂಗ್ ಮಶಿನ್ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ಸೋಂಕಿತರಿರುವ ವಾರ್ಡನಿಂದಲೇ ಅವಶ್ಯವಿದ್ದಲ್ಲಿ ಹೊರಗೆ ವಿಷಯ ತಿಳಿಸುವ ಹಾಗೆ ದ್ವನಿವರ್ಧಕದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಈ ಕಟ್ಟಡದಲ್ಲಿ ಸಾಂಸ್ಥಿಕ ಕ್ವಾರೆಂÉೈನ್ ಕೇಂದ್ರ ಇರವಾಗಿನಿಂದ ಇಲ್ಲಿ ನೊಡೆಲ್ ಆಧಿಕಾರಿಯಾಗಿ ಸಮರ್ಥವಾಗಿ ಕಾರ್ರ್ಯ ನಿರ್ವಹಿಸಿರುವ ನಗರಸಭೆಯ ಅಧಿಕಾರಿ ಮೈಕಲ್ ಫರ್ನಾಂಡಿಸ್‍ರವರೇ ಈ ಕೊವಿಡ್ ಕೇರ್ ಸೆಟರ್‍ನ ನೊಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಧವಾರ ಹಾಗೂ ಗುರುವಾರದ ಸೋಂಕಿತರನ್ನು ಗುರುವಾರ ಸಂಜೆಯೇ ಈ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಲಾಗುವುದೆಂದು ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ ಹಾಗೂ ದಾಂಡೇಲಿ ಆಸ್ಪತ್ರೆಯ ಮುಖ್ಯ ವೈದ್ಯದಿಕಾರಿ ಡಾ. ರಾಜೇಶ ಪ್ರಸಾದ ತಿಳಿಸಿದ್ದಾರೆ.

ಜಿಲ್ಲಾಡಳಿತದ ನಿರ್ದೇಶನದಂತೆ ಕ್ರಮ
ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತದ ನಿರ್ದೇಶನದಂತೆ ಇಲ್ಲಿ ಕೊವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಇನ್ನು ಮುಂದೆ ಇಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ಒದಗಿಸಲಾಗುತ್ತದೆ. ಅವಶ್ಯವಿದ್ದರೆ ಮಾತ್ರ ಕಾರವಾರಕ್ಕೆ ಕಳುಹಿಸಲಾಗುವುದು. ಸರಕಾರ ಹಾಗೂ ಜಿಲ್ಲಾಡಳಿತದ ನಿಯಮಾವಳಿಯಂತೆ ಕಾರ್ಯನಿರ್ವಹಿಸಲಾಗುತ್ತದೆ ಎಂದು ತಹಶೀಲದಾರ ಪರಮಾನಂದ ತಿಳಿಸಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. Wonderful and marvelous step been taken by the officials… hats off to the corona warriors…keep up the good work….god bless u all and all the Indians….

Leave a Reply

Your email address will not be published.


*