ದಾಂಡೇಲಿಯಲ್ಲಿ ಸೋಮವಾರದಿಂದ ‘ಫುಲ್ ಡೇ ವಾಲೆಂಟರಿ ಲಾಕ್‍ಡೌನ್’: ಮಾರ್ಕೆಟ್‌ಗೆ ಶನಿವಾರ 3 ಗಂಟೆಯೇ ಡೆಡ್‌ಲೈನ್‌

ಸಹಕಾರಕ್ಕೆ ಸಾರ್ವಜನಿಕರಲ್ಲಿ ಮನವಿ...

ದಾಂಡೇಲಿ ನಗರದ ಒಂದು ನೋಟ

ದಾಂಡೇಲಿ: ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಗರಸಭಾ ಸದಸ್ಯರ ಮನವಿಯ ಮೇರೆಗೆ ದಾಂಡೇಲಿಯಲ್ಲಿ ಸೋಮವಾರದಿಂದ ಫುಲ್ ಡೇ ವಾಲೆಂಟರಿ ಲಾಕ್‍ಡೌನ್ ಮಾಡಲಾಗುವುದು ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ನಗರಸಭೆಯ ಸರ್ವ ಪಕ್ಷಗಳ ಸದಸ್ಯರೂ ಬುಧವಾರ ಸಭೆ ಸೇರಿ ಒಂದು ವಾರದ ಕಾಲ ದಿನವಿಡೀ ಲಾಕ್‍ಡೌನ್‍ಗೆ ಮನವಿ ಮಾಡಿದ್ದರು. ಭಾ.ಜ.ಪ.ದವರೂ ಕೂಡಾ ಜಿಲ್ಲದಿಕಾರಿಗಳಿಗೆ ಮನವಿ ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದು ಅವರೂ ಸಹ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಜನಪ್ರತಿನಿದಿಗಳ ಮನವಿಯಂತೆ ಜನರೇ ಸ್ವಯಂ ಪ್ರೆರಣೆಯಿಂದ ಲಾಕ್‍ಡೌನ್ ಮಾಡುವುದಿದ್ದರೆ ಅಭ್ಯಂತರವಿಲ್ಲ. ಆದರೆ ಸರಕಾರ ಹಾಗೂ ಜಿಲ್ಲಾಡಳಿತ ಅಥವಾ ಸ್ಥಳೀಯ ಆಡಳಿತದಿಂದ ಆದೇಶವಿರುವುದಿಲ್ಲ. ಆದರೆ ಲಾಕ್‍ಡೌನ್‍ಗೆ ಆಡಳಿತ ಬಾಹ್ಯವಾಗಿ ಸಹಕರಿಸುತ್ತದೆ ಎಂದಿದ್ದಾರೆ.

ಶುಕ್ರವಾರ, ಶನಿವಾರ ಅರ್ಧದಿನದ ಲಾಕ್‍ಡೌನ್ ಮುಂದುವರೆಯುತ್ತದೆ. ಭಾನುವಾರ ಎಂದಿನಂತೆ ಸರಕಾರದ ಫುಲ್‍ಡೇ ಲಾಕ್‍ಡೌನ್ . ಸೋಮವಾರದಿಂದ ಒಂದುವಾರ ದಾಂಡೇಲಿಯಲ್ಲಿ ಇಡೀ ದಿನ ಸ್ವಯಂ ಪ್ರೇರಣೆಯ ಲಾಕ್‍ಡೌನ್ ನಡೆಯುತ್ತದೆ. ಅಂದರೆ ಶನಿವಾರ ಮದ್ಯಾಹ್ನ 3 ಗಂಟೆಯಿಂದಲೇ ದಾಂಡೇಲಿಯಲ್ಲಿ ಲಾಕ್‌ಡೌನ್‌ ಆರಂಭವಾದಂತಾಗುತ್ತದೆ. ಶನಿವಾರ ಮದ್ಯಾಹ್ನದ ನಂತರ ಯಾವುದೇ ಅಂಗಡಿ, ಮಳಿಗೆಗಳು ನಗರ ಅಷ್ಟೇ ಅಲ್ಲ ಯಾವುದೇ ಗಲ್ಲಿಯಲ್ಲಿಯೂ ತೆರೆಯುವಂತಿಲ್ಲ. ಸಂತೆ ನಡೆಯುವುದಿಲ್ಲ. ಜನರು ಮೆಡಿಕಲ್, ಹಾಲು, ಪೇಪರ್ ಹೊರತು ಪಡಿಸಿ ಬೇರೆ ಯಾವುದೇ ವಸ್ತುಗಳ ಖರೀದಿಗೆಂದು ಮಾರುಕಟ್ಟೆಗೆ ಬರುವ ಹಾಗಿಲ್ಲ. ತಳ್ಳೋ ಗಾಡಿ ಅಥವಾ ವಾಹನದ ಮೇಲೆ ತರಕಾರಿ ಹಾಗೂ ಇತರೆ ದಿನಸಿ ಸಾಮಾನುಗಳನ್ನೂ ಸಹ ನಗರಾಡಳಿತದಿಂದ ಮನೆಗಳಿಗೆ ಪೂರೈಕೆ ಮಾಡಲಾಗುವುದಿಲ್ಲ. ಇದು ಸ್ವಯಂ ಪ್ರೇರಣೆಯ ಲಾಕ್‍ಡೌನ್. ಒಂದು ವಾರ ಕಟ್ಟುನಿಟ್ಟಿನ ಲಾಕ್‍ಡೌನ್ ಪಾಲಿಸಬೇಕು. ಜೊತೆಗೆ ಜನರೂ ಸಹ ಶಾಂತತೆ ಕಾದುಕೊಳ್ಳಬೇಕು. ನಿಯಮ ಪಾಲಿಸಬೇಕು ಎಂದಿದ್ದಾರೆ.

ಇನ್ನು ಮುಂದೆ ಮದುವೆ, ಉಪನಯನ, ಸಭೆ ಸಮಾರಂಭ ಅಂತೆಯೂ ಸಹ ಜನರು ಗುಂಪಾಗಿ ಸೇರುವ ಹಾಗಿಲ್ಲ ಎಂದು ತಿಳಿಸಿರುವ ತಹಶೀಲ್ದಾರರು, ದಾಂಡೇಲಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಎಲ್ಲರೂ ಸಹ ಸ್ವಯಂ ಪ್ರೆರಣೆಯಿಂದ ಸಹಕರಿಸಬೇಕು ಎಂದು ತಹಶೀಲ್ದಾರ ಶೈಲೇಶ ಪರಮಾನಂದ ಮನವಿ ಮಾಡಿದ್ದಾರೆ.

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*