ದಾಂಡೇಲಿ : ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ದಾಂಡೇಲಿ ತಾಲೂಕು ಘಟಕದ ಸಂಚಾಲಕರಾಗಿ ಅರಿವು ಪೌಂಡೇಷನ್‍ನ ಅಧ್ಯಕ್ಷ ರೋಶನ್ ನೇತ್ರಾವಳಿ ಪುನರಾಯ್ಕೆಯಾಗಿದ್ದಾರೆ.
ಸಹ ಸಂಚಾಲಕರಾಗಿ ಪತ್ರಕರ್ತ ಸಂದೇಶ್ ಎಸ್.ಜೈನ್ ಅವರು ಆಯ್ಕೆಯಾಗಿದ್ದಾರೆ. ಅ.ಭಾ.ಸಾ.ಪ. ಪ್ರಾಂತ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆಯವರ ಉಪಸ್ಥಿತಿಯಲ್ಲಿ ಭಾನುವಾರ ಪ್ರಾಂತ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟರು ದಾಂಡೇಲಿ ಘಟಕದ ನೂತನ ಪದಾಧಿಕಾರಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ ಎಂದು ಸಂಚಾಲಕ ರೋಷನ್ ನೇತ್ರಾವಳಿ ತಿಳಿಸಿದ್ದಾರೆ. ರೋಶನ್ ನೇತ್ರಾವಳಿಯವರು ಈ ಹಿಂದಿನ ಅವಧಿಯಲ್ಲಿಯೂ ಸಹ ಅಭಾಸಾಪ ದ ಸಂಚಾಲಕರಾಗಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Be the first to comment