ದಾಂಡೇಲಿಯಲ್ಲಿಂದು 22 ಕೊರೊನಾ ಪಾಸಿಟಿವ್ ? ಸಾವಿನಲ್ಲೂ ಸೋಂಕು ದೃಢ ?

ದಾಂಡೇಲಿಯಲ್ಲಿ ಮಂಗಳವಾರ ಕೊರೊನಾ ತನ್ನ ರೌದ್ರಾವತಾರ ತೋರಿಸಿದ್ದು… ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಂಗಳವಾರ ಒಂದೇ ದಿನ 22 ಜನರಲ್ಲಿ ಸೋಂಕು ದೃಢ ಪಟ್ಟಿದೆ ಎನ್ನಲಾಗಿದೆ.

ಇವರಲ್ಲಿ ಟೌನ್ ಶಿಪ್ ಸ್ವೀಪರ್ ಕ್ವಾಟ್ರಸ್ ನ ಒಂದೇ ಪ್ರದೇಶದ 12 ಜನರಲ್ಲಿ ಸೋಂಕು ದೃಢವಾಗಿದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಉಳಿದವರ ಮಾಹಿತಿ ಬರಬೇಕಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ರಾತ್ರಿ ಮಾರುತಿ ನಗರದ ವೃದ್ದೆಯೋರ್ವಳು ಮೃತಪಟ್ಟಿದ್ದು, ಈಕೆಯಲ್ಲಿಯೂ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಅನಾರೋಗ್ಯ ಪೀಡಿತಳಾಗಿದ್ದ ಈಕೆ ಇ.ಎಸ್.ಐ. ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಕೊರೊನಾ ಸೋಂಕಿನ ಕಾರಣಕ್ಕೆ ಈ ಅಸ್ಪತ್ರೆ ಸೀಲ್ ಡೌನ ಆದ ಹಿನ್ನೆಲೆಯಲ್ಲಿ ಈಕೆಯನ್ನು ಮನೆಗೆ ಕಳುಹಿಸಿ ಕ್ವಾರೆಂಟೈನ್ ನಲ್ಲಿ ಇಡಲಾಗಿತ್ತು. ರೋಗ ಬಿಗಡಾಯಿಸಿದ ಈಕೆ ಸೋಮವಾರ ರಾತ್ರಿ ಮೃತಪಟ್ಟಿದ್ದಳು. ಮಂಗಳವಾರ ಬಂದ ಹೆಲ್ತ ಬುಲೆಟಿನ್ ನಲ್ಲಿ ಈಕೆಯದ್ದು ಪಾಸಿಟಿವ್ ಬಂದಿರುತ್ತದೆ.

ಈ ಸಾವನ್ನು ಕೊರೊನಾ ಸಾವೆಂದೇ ಪರಿಗಣಿಸಿದರೆ ದಾಂಡೇಲಿಯಲ್ಲಿ ಕೊರೊನಾಕ್ಕೆ ಮೊದಲ ಬಲಿಯಾದಂತಾಗಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದಾಗಿ ಜನರಲ್ಲಿ ಆತಂಕ ಹೆಚ್ಚುತ್ತಿದೆ.

ಸೀಲ್ ಡೌನ್ ಆದ ಸ್ವೀಪರ್ಸ್ ಕ್ವಾಟ್ರಸ್ ಪ್ರದೇಶ

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

6 Comments

  1. Pls maintain social distancing… All people pls be self quarantined at home… Stay home. Stay safe…

  2. ಲಾಕ್ಡೌ ಡೌನ್ ಮಾಡಬೇಕು. ಯಾರು ಊರಿಂದ ಹೊರಗಡೆ ಹೋಗದೆ ಇರೋ ಹಾಗೆ ನೋಡಿಕೊಳ್ಳಬೇಕು, ಬಸ್ ಮತ್ತೆ ಎಲ್ಲಾ ವಾಹನ ಸಂಚಾರ ಸ್ಥಗಿತಗೊಳಿಸಬೇಕು. ಮತ್ತು ಯಾರು ಬೇರೆ ಊರಿಂದ ದಾಂಡೇಲಿ ಗೆ ಬರದೇ ಇರೋ ಹಾಗೆ ನೋಡಿಕೊಳ್ಳಬೇಕು….

Leave a Reply

Your email address will not be published.


*