ಅಂಬಿಕಾನಗರ ಅರಣ್ಯದಲ್ಲಿ ಕರಡಿ ದಾಳಿ: ಪ್ರಾಣಾಪಾಯದಿಂದ ಪಾರು

ಕರಡಿ ದಾಳಿಗೊಳಗಾದ ಮಾದೇವ

ದಾಂಡೇಲಿ: ತಾಲೂಕಿನ ಅಂಬಿಕಾನಗರದ ಅರಣ್ಯ ಪ್ರದೇಶದಲ್ಲಿ ಉರುವಲು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದ ವ್ಯಕ್ತೊಯೋರ್ವನ ಮೇಲೆ ಕರಡಿಗಳು ದಾಳಿ ನಡೆಸಿದ್ದು, ಪ್ರಾಣಾಪಾಯಿಂದ ಪಾರಾಗಿರುವ ವ್ಯಕ್ತಿಯನ್ನು ದಾಂಡೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂಬಿಕಾನಗರ ಮಾರ್ಕೆಟ್ ಪ್ರದೇಶದ ನಿವಾಸಿ ಮಾದೇವ ಕಳಗೊಳ (40) ಎಂಬ ವ್ಯಕ್ತಿಯೇ ಕರಡಿ ದಾಳಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾನೆ. ಈತ ತಮ್ಮ ಮನೆ ಬಳಕೆಯ ಉರುವಲು ಕಟ್ಟಿಗೆ ತರಲೆಂದು ಹತ್ತಿರದ ಅರಣ್ಯಕ್ಕೆ ಹೋಗಿದ್ದ ಈಸಂದರ್ಭದಲ್ಲಿ ಆತನೇ ಹೇಳಿರುವ ಹಾಗೆ ಎರಡು ಕರಡಿಗಳು ಆತನ ಮೇಲೆ ದಾಳಿ ನಡೆಸಿವೆ. ಆತ ಆ ಕರಡಿಗಳ ಜೊತೆ ಕಾದಾಡಿ ಪ್ರ್ರಾಣ ರಕ್ಷಿಸಿಕೊಂಡು ಹಾಗೂ ಹೀಗೂ ತೆವಳುತ್ತ ಅಂಬಿಕಾನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಂದು ರಸ್ತೆಯ ಪಕ್ಕ ನಿತ್ರಾಣನಾಗಿ ಬಿದ್ದುಕೊಂಡಿದ್ದ.
ಸಂಜೆಯ ವಾಯು ವಿಹಾರಕ್ಕೆ ಹೋದ ಜನರು ಈತನನ್ನು ಕಂಡು ತಕ್ಷಣ ಅಂಬಿಕಾನಗರದ ಕೆ.ಪಿ,.ಸಿ. ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ದಾಂಡೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ್ಧಾರೆ. ಕರಡಿಗಳು ಮಾದೇವನ ಮುಖ ಮೈಯ್ಯನ್ನು ಪರಚಿ ಬಲವಾಗಿ ಗಾಯಗೊಳಿಸಿವೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ವಲಯ ಅರಣ್ಯಾಧಿಕಾರಿ ಸಂತೋಷ್‌ ಚೌಹಾಣರವರು ಸ್ಥಳಕ್ಕೆ ಧಾವಿಸಿ, ಅಂಬಿಕಾನಗರ ಆಸ್ಪತ್ರೆ ಚಿಕಿತ್ಸೆ ಕೊಡಿಸಿ, ನಂತರ ದಾಂಡೇಲಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಔಷಧೋಪಚಾರ ಮಾಡಿಸಿದ್ದಾರೆ. ಅರಣ್ಯ ಇಲಾಖೆಯಿಂದ ಔಷಧೋಪಚಾರದ ಖರ್ಚು ಕೊಡಿಸುವ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ಕುಳಗಿಯಿಂದ ಅಂಬಿಕಾನಗರ ಭಾಗದಲ್ಲಿ ಕರಡಿಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚುತ್ತಿದ್ದು, ಇದು ಆ ಭಾಗದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕರಡಿ ದಾಳಿಗೊಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗಳು

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

2 Comments

Leave a Reply

Your email address will not be published.


*