ಅಂಬಿಕಾನಗರ ಅರಣ್ಯದಲ್ಲಿ ಕರಡಿ ದಾಳಿ: ಪ್ರಾಣಾಪಾಯದಿಂದ ಪಾರು
ದಾಂಡೇಲಿ: ತಾಲೂಕಿನ ಅಂಬಿಕಾನಗರದ ಅರಣ್ಯ ಪ್ರದೇಶದಲ್ಲಿ ಉರುವಲು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದ ವ್ಯಕ್ತೊಯೋರ್ವನ ಮೇಲೆ ಕರಡಿಗಳು ದಾಳಿ ನಡೆಸಿದ್ದು, ಪ್ರಾಣಾಪಾಯಿಂದ ಪಾರಾಗಿರುವ ವ್ಯಕ್ತಿಯನ್ನು ದಾಂಡೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬಿಕಾನಗರ ಮಾರ್ಕೆಟ್ ಪ್ರದೇಶದ ನಿವಾಸಿ ಮಾದೇವ ಕಳಗೊಳ (40) ಎಂಬ ವ್ಯಕ್ತಿಯೇ ಕರಡಿ ದಾಳಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾನೆ. […]