ದಾಂಡೇಲಿ

ದಾಂಡೇಲಿಯಲ್ಲಿ ಶುಕ್ರವಾರ ಒಂದೇ ದಿನ 8 ಕೊರೊನಾ ಪಾಸಿಟಿವ್… ಇ.ಎಸ್‌.ಐ. ಆಸ್ಪತ್ರೆ ಸಿಬ್ಬಂದಿಗಳಲ್ಲಿಯೂ ಸೋಂಕು

ದಾಂಡೇಲಿ: ನಗರದಲ್ಲಿ ಶುಕ್ರವಾರ ಒಂದೇ ದಿನ ಎಂಟು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದ ದಾಂಡೇಲಿಗರು ಆತಂಕಕ್ಕೊಳಗಾಗುವಂತಾಗಿದೆ. ಹುಬ್ಬಳ್ಳಿಯ ಎಸ್.ಡಿ.ಎಮ್. ಗೆ ಹೋಗಿ ಚಿಕಿತ್ಸೆ ಪಡೆದು ಬಂದು ಕೊರೊನಾ ಸೋಂಕಿಗೊಳಗಾಗಿ ಕಾರವಾರ ಕ್ರಿಮ್ಸ್ ಆಸ್ಪತ್ರೆ ಸೇರಿರುವ ಇಲ್ಲಿಯ ಬಸವೇಶ್ವರ ನಗರದ ಗರ್ಭಿಣಿಯ […]

ವರ್ತಮಾನ

ದಾಂಡೇಲಿ ಸಿಂಹಕೂಟಕ್ಕೆ ಮಹಿಳಾಮಣಿಗಳ ಸಾರಥ್ಯ

ದಾಂಡೇಲಿ ಸಿಂಹಕೂಟ (ಲಾಯನ್ಸ್ ಕ್ಲಬ್) ಕ್ಕೆ ಪ್ರಸಕ್ತ ಸಾಲಿನಲ್ಲಿ ಮಹಿಳಾ ಮಣಿಗಳೇ ಸಾರಥ್ಯ ವಹಿಸಿದ್ದು, ಇದು ದಾಂಡೇಲಿ ಲಾಯನ್ಸ್ ಕ್ಲಬ್‍ನ ಇತಿಹಾಸದಲ್ಲಿಯೇ ಮೊದಲ ಬಾರಿಯಾಗಿದೆ. ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಅನ್ನಪೂರ್ಣ ಬ್ಯಾಕೋಡ, ಕಾರ್ಯದರ್ಶಿಯಾಗಿ ನಾಗರತ್ನಾ ಹೆಗಡೆ, ಖಜಾಂಚಿಯಾಗಿ ಲತಾ ಯು. ಶೆಟ್ಟಿ ಆಯ್ಕೆಯಾಗಿದ್ದಾರೆ. ಉಳಿದಂತೆ ಲಯನ್ಸ್ ಕ್ಲಬ್ […]

ವರ್ತಮಾನ

ಸರಕಾರಿ ನೌಕರರಿಗೆ ಅಗತ್ಯ ರಕ್ಷಣೆ ನೀಡಿ: ಮುಖ್ಯಮಂತ್ರಿಗಳಿಗೆ ಮನವಿ

ದಾಂಡೇಲಿ: ಬಂಗಾರುಪೇಟೆ ತಾಲೂಕಿನ ತಹಶೀಲ್ದಾರ ಬಿ.ಕೆ. ಚಂದ್ರಮೌಳೇಶ್ವರವರ ಹತ್ಯೆ ಖಂಡಿಸಿ, ಸರಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಅಗತ್ಯ ರಕ್ಷಣೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸರಕಾರಿ ನೌಕರರ ಸಂಘಟನೆಯ ದಾಂಡೇಲಿ ಘಟಕದವರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ. ಕೋಲಾರದ ಬಂಗಾರ ಪೇಟೆಯ ತಹಶಿಲ್ದಾರರು ಜಮೀನು ವ್ಯಾಜ್ಯಕ್ಕೆ ಸಂಬಂದಿಸಿ […]

ಈ ಕ್ಷಣದ ಸುದ್ದಿ

ಶನಿವಾರದಿಂದ ದಾಂಡೇಲಿಯಲ್ಲಿ ಅರ್ಧದಿನ ಲಾಕ್‍ಡೌನ್: ಮುಂಜಾನೆ 8ರಿಂದ ಮದ್ಯಾಹ್ನ 3ರವರೆಗೆ ಮಾತ್ರ ಓಪನ್

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಕಾರಣದಿಂದಾಗಿ ದಾಂಡೇಲಿಯಲ್ಲಿ ಶನಿವಾರದಿಂದ ಮದ್ಯಾಹ್ನ 3 ಗಂಟೆಯ ನಂತರ ಕಟ್ಟುನಿಟ್ಟಿನ ಲಾಕ್‌ ಡೌನ್‌ ಆಗಲಿದೆ. ದಾಂಡೇಲಿಯಲ್ಲಿ ಶುಕ್ರವಾರ ಎಂಟು ಕೊರೊನಾ ಪೊಸಿಟಿವ್ ಪ್ರಕರಣಗಳು ದೃಢವಾಗಿವೆ. ಇಲ್ಲಿಯವರೆಗೆ ಒಟ್ಟೂ 27 ಪ್ರಕರಣಗಳಾದಂತಾಗಿದೆ. ಜನ ಆತಂಕಕ್ಕೊಳಗಾಗುತ್ತಿದ್ದಾರೆ. ಇದರಿಂದ ನಗರದ ಜನರು ಹಾಗೂ ವ್ಯಾಪಾರಸ್ಥರೇ ಸ್ವಯಂ […]

ಈ ಕ್ಷಣದ ಸುದ್ದಿ

ದಾಂಡೇಲಿಗರನ್ನು ಭಯಬೀಳಿಸಲಿದೆ ಇಂದಿನ ಹೆಲ್ತ್ ಬುಲೆಟಿನ್!!

ಇಂದಿನ ಹೆಲ್ತ ಬುಲೆಟಿನ್ ದಾಂಡೇಲಿಗರನ್ನು ಭಯಬೀಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಡನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶುಕ್ರವಾರದಂದು ದಾಂಡೇಲಿಯಲ್ಲಿ ಈವರೆಗೆ ಬಂದಿದ್ದ ದಿನದ ವರದಿಗಳಿಗಿಂತ ಹೆಚ್ಚಿನ ಪಾಸಿಟಿವ್ ಪ್ರಕರಣ ದಾಖಲಾಗುವ ಮಾಹಿತಿಯಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ದಾಂಡೇಲಿಯೊಂದರಕ್ಹೆಲೇ ಚ್ಚುಕಮ್ಮಿ 8 ಪಾಸಿಟಿವ್ ಪ್ರಕರಣ ಎಂಬ ಮಾಹಿತಿಯಿದೆ.