ದಾಂಡೇಲಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂಯೋಜಿತ ದಾಂಡೇಲಿ ಪ್ರೆಸ್‍ಕ್ಲಬ್‍ನ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಯು.ಎಸ್. ಪಾಟೀಲ, ಕಾರ್ಯದರ್ಶಿಗಳಾಗಿ ಗುರುಶಾಂತ ಜಡೆಹಿರೇಮಠ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಬಿ.ಪಿ. ಮಹೇಂದ್ರಕುಮಾರ, ಖಜಾಂಚಿಯಾಗಿ ಕೃಷ್ಣಾ ಪಾಟೀಲ, ಸದಸ್ಯರಾಗಿ ಬಿ.ಎನ್. ವಾಸರೆ, ಸಂದೇಶ ಜೈನ್ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷ ಬಿ.ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಕಾರ್ಯದರ್ಶಿ ಸಂದೇಶ ಜೈನ್ ವಂದಿಸಿದರು.
Be the first to comment