ದಾಂಡೇಲಿ: ನಗರದ ಉದಯೋನ್ಮುಖ ನೃತ್ಯ ಗುರು, ಕಲಾವಿದ ಅನಿಲ್ ಎಸ್.ಕೆ. (40) ರವಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು.
ನಗರದಲ್ಲಿ ತನ್ನದೇ ಆದ ನೃತ್ಯ ಆಕಾಡೆಮಿ ಪ್ರಾರಂಭಿಸಿದ್ದ ನೂರಾರು ಶಿಷ್ಯರನ್ನು ಹೊಂದಿದ್ದರು. ಹಲೆವೆಡೆ ನೃತ್ಯ ಪ್ರದರ್ಶನ ನೀಡಿದ್ದ ಇವರು ಬಹುಮಾನವನ್ನೂ ಪಡೆದಿದ್ದರು. ಸಾಹಸಮಯ ನೃತ್ಯ ಪ್ರದರ್ಶನಕ್ಕೆ ಪ್ರಾವೀಣ್ಯತೆ ಹೊಂದಿದ್ದರು. ಸರಳ ವ್ಯಕ್ತಿತ್ವದ ಸ್ನೇಹ ಜೀವಿಯಾಗಿದ್ದ ಅನೀಲ ಅಪಾರವಾದ ಸ್ನೇಹಿತರ ಬಳಗವನ್ನು ಹೊಂದಿದ್ದಾರೆ.
ತಂದೆ, ತಾಯಿ, ಮಡದಿ ಹಾಗೂ ಮಗನನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಅವರ ಸ್ನೇಹಿತರು ಹಾಗೂ ಶಿಷ್ಯ ಬಳಗ ಕಂಬನಿ ಮಿಡಿದಿದೆ.
May his soul rest in peace (RIP)