ದಾಂಡೇಲಿಯ ಗರ್ಭಿಣಿ ಹಾಗೂ ಚಾಲಕನಲ್ಲಿ ಕೊರೊನಾ ಪಾಸಿಟಿವ್….

ದಾಂಡೇಲಿ: ದಾಂಡೇಲಿಯ ಬಸವೇಶ್ವರ ನಗರದ 25 ವರ್ಷದ ಗರ್ಭಿಣಿ ಮಹಿಳೆ ಹಾಗೂ ಹಳಿಯಾಳ ರಸ್ತೆ ಅಲೈಡ ಏರಿಯಾದ 50 ವರ್ಷದ ಚಾಲಕನಲ್ಲಿ ಭಾನುವಾರ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಬಸವೇಶ್ವರ ನಗರದ ಮಹಿಳೆ ಚಿಕುತ್ಸೆಗೆಂದು ಧಾರವಾಡ ಆಸ್ಪತ್ರೆಗೆ ಹೋಗಿ ಬಂದವಳಾಗಿದ್ದು, ಅಲ್ಲಿಯೇ ನಡೆಸಿದ ಪರೀಕ್ಷೆಯಂತೆ ಅವಳಲ್ಲಿ ಕೊರೊನಾ ಸೋಂಕು ಖಚಿತವಾಗಿದೆ. ಅವಳ ಪತಿ ಹಾಗೂ ಇತರರನ್ನು ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.

ಹಳಿಯಾಳ ರಸ್ತೆಯ ಚಾಲಕ ಈ ಹಿಂದೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿರುವ ಥರ್ಡ್ ನಂಬರ ಗೇಟ್ ನ ತಾಯಿ ಮಗಳನ್ನು ತನ್ನ ವಾಹನದಲ್ಲಿ ದಾಂಡೇಲಿಗೆ ಕರೆತಂದ ವ್ಯಕ್ತಿಯಾಗಿದ್ದು, ಈತ ಕ್ವಾರೆಂಟೈನ್ ನಲ್ಲಿದ್ದ. ರವಿವಾರದ ಎರಡು ಪ್ರಕರಣ ಸೇರಿ ದಾಂಡೇಲಿಯಲ್ಲಿ 13 ಕಿರೊನಾ ಪ್ರಕರಣಗಳಾದಂತಾಗಿದೆ.

ಹಳಿಯಾಳದಲ್ಲಿಯೂ ಒಂದು ಪಾಸಿಟಿವ್ ದೃಢವಾಗಿದೆ. ಭಟ್ಕಳದಲ್ಲಿ 8 ಸೇರಿ ಜಿಲ್ಲೆಯಲ್ಲಿ 19 ಜನರಲ್ಲಿ ಕೊರೊನಾ ಸೋಂಕು ದೃಢ ಪಟ್ಟಿರುವ ಮಾಹಿತಿಯಿದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಜನ ಆತಂಕಕ್ಕೊಳಗಾಗಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*