ದಾಂಡೇಲಿ: ನಗರದಲ್ಲಿ ದಿನದಿಂದ ದಿನಕ್ಕೆ ಹಳದಿ ಕಾಮಾಲೆಯ ಸೋಂಕು ಹೆಚ್ಚುತ್ತಿದ್ದು, ಇಲಾಖಾ ವರದಿಯ ಪ್ರಕಾರವೇ ರವಿವಾರದವರೆಗೆ ದಾಂಡೇಲಿಯಲ್ಲಿ ಕಾಮಾಲೆ ಪೀಡಿತರ ಸಂಖ್ಯೆ 500ರ ಗಡಿಯನ್ನು ದಾಟಿದೆ. ಇದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.
ಕಳೆದೊಂದು ತಿಂಗಳಿನಿಂದ ದಾಂಡೇಲಿಯಲ್ಲಿ ಕಾಮಾಲೆಯ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಮಾದ್ಯಮಗಳು ವರದಿ ಮಾಡಿ ಇಲಾಖೆಗಳ ಗಮನ ಸೆಳೆದಿದ್ದವು. ಜಿಲ್ಲಾ ಆರೋಗ್ಯ ಇಲಾಖೆಯೂ ಇದನ್ನು ಗಂಭೀರವಾಗಿ ಪತಿಗಣಿಸಿ ನಗರಾಡಳಿತಕ್ಕೆ ಇದರ ನಿಯಂತ್ರಣದ ಬಗ್ಗೆ ನಿರ್ದೇಶನ ನೀಡಿತ್ತು. ಇದು ಬಹುತೇಕ ನೀರಿನಿಂದ ಬರುವ ಸಾಕ್ರಾಮಿಕ ರೋಗವಾಗಿದ್ದು, ನಗರಸಭೆಯವರು ಸರಬರಾಜು ಮಾಡುವ ಕುಡಿಯುವ ನೀರಿನ ಬಗ್ಗೆ ಆಕ್ಷೇಪವೆದ್ದಿತ್ತು. ಆದರೆ ನಗರಸಭೆಯವರು ನೀರನ್ನು ಪರೀಕ್ಷೆಗೊಳಪಡಿಸಲಾಗಿದ್ದು ಅದರಲ್ಲಿ ದೋಷವಿಲ್ಲ ಎಂಬ ಮಾಹಿತಿ ನೀಡುತ್ತಿದ್ದಾರೆ.
ಈ ನಡುವೆ ಪಂಪ್ ಹೌಸ್ ಸ್ವಚ್ಚಗೊಳಿಸಲಾಗಿದೆ. ದ್ವನಿವರ್ಧಕದಲ್ಲಿ ಈ ರೋಗದ ಲಕ್ಷಣ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿದ ಉಪ ವಿಭಾಗಾಧಿಕಾರಿಗಳೂ ಸಹ ಈ ರೋಗದ ಗಂಭೀರತೆಯ ಬಗ್ಗೆ ತಿಳಿಸಿ, ಜನರು ಹೆದರುವ ಅಗತ್ಯವಿಲ್ಲ. ನಗರಾಡಳಿತ ಎಲ್ಲ ರೀತಿಯ ಮುಜಾಗರೂಕತಾ ಕ್ರಮ ಕೂಗೊಳ್ಳುತ್ತಿದೆ ಎಂದು ಹೇಳಿ ಪ್ರತೀ ಎರಡು ದಿನಕ್ಕೊಮ್ಮೆ ಕಾಮಾಲೆ ಪೀಡಿತರ ಅಂಕಿ ಅಂಶ ಬಿಡುಗಡೆ ಮಾಡುವಂತೆ ತಹಶಿಲ್ದಾರರಿಗೆ ಸೂಚಿಸಿದ್ದರು.
ರವಿವಾರದ ಪಡೆದ ಮಾಹಿತಿಯಂತೆ ಜುನ್ 30 ರಂದು 21, ಜುಲೈ 1 ರಂದು 53 ಹಾಗೂ ಜುಲೈ 2 ರಂದು 25, ಜುಲೈ 3 ರಂದು 19, ಜುಲೈ 4 ರಂದು 17 ಜುಲೈ 5 ರಂದು 7 ಜನರು ಸೇರಿ ರವಿವಾರದವರೆಗೆ ಒಟ್ಟೂ 502 ಜನರು ಕಾಮಾಲೆ ರೋಗಕ್ಕೆ ಒಳಗಾಗಿರುವುದು ಆರೋಗ್ಯ ಇಲಾಖೆಯ ಮಾಹಿತಿಯಿಂದ ದಾಖಲಾಗಿದೆ. ಇದು ನಗರದ ಖಾಸಗಿ ಆಸ್ಪತ್ರೆ, ಲ್ಯಾಬ್ ಹಾಗೂ ಆಶಾ ಕಾರ್ಯಕರ್ತೆಯರಿಂದ ಸಂಗ್ರಹಿಸಿದ ಮಾಹಿತಿಯಾಗಿದೆ. ಕಾಮಾಲೆ ರೋಗ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಜನರು ಮಳೆಗಾಲವಾಗಿದ್ದರಿಂದ ಕುದಿಸಿ ಆರಿಸಿದ ನೀರು ಕುಡಿಯುವ ಜೊತೆಗೆ ವಯಕ್ತಿಕ ಸ್ವಚ್ಚತೆಯನ್ನು ಕಾದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಲ್ಯಾಬ್ ಮುಖ್ಯಸ್ಥರ ಜೊತೆ ಸಭೆ
ನಗರದಲ್ಲಿರುವ ರಕ್ತ, ಮೂತ್ರ ಹಾಗೂ ಇತರೆ ಪರೀಕ್ಷಾ ಲ್ಯಾಬ್‍ನ ಮುಖ್ಯಸ್ಥರ ಜೊತೆ ಸಭೆ ನಡೆಸಿದ ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ, ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಕದಂರವರು ಪ್ರತಿ ನಿತ್ಯ ಲ್ಯಾಬ್‍ಗಳಲ್ಲಿ ಪರೀಕ್ಷೆಗೊಳಗಾಗಿ ಕಾಮಾಲೆ ದೃಢ ಪಟ್ಟವರ ಅಂಕೆ ಸಂಖ್ಯೆಯ ಯಾದಿಯನ್ನು ಕಡ್ಡಾಯವಾಗಿ ನೀಡುವಂತೆಯ ನಿರ್ದೇಶಿಸಿದ್ದಾರೆ.
ಕೊರೊನಾಕ್ಕಿಂತ ಹೆಚ್ಚಿನ ಆತಂಕ ಮೂಡಿಸಿದ ಕಾಮಾಲೆ
ದಾಂಡೇಲಿಯಲ್ಲಿ ಈ ಹಳದಿ ಕಾಮಾಲೆ ಜನರಲ್ಲಿ ಕೊರೊನಾಕ್ಕಿಂತ ಹೆಚ್ಚಿನ ಆತಂಕ ಮೂಡಿಸುತ್ತಿದೆ. ದಾಂಡೇಲಿಯಲ್ಲಿ ಇಲ್ಲಿಯವರೆಗೂ 14 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಈಗಾಗಲೇ ಏಳ ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಅದಕ್ಕೆ ಅವಶ್ಯ ಮುಂಜಾಗೃತೆಯನ್ನು ಕೈಗೊಳ್ಳಲಾಗುತ್ತಿದೆ. ಆದರೆ ನಗರದಲ್ಲಿ ಇತ್ತಿಚೆಗೆ ಹರಡಿರುವ ಕಾಮಾಲೆ ಮಾತ್ರ ಜನರನ್ನು ಭಯಬೀತಗೊಳಿಸಿರುವುದಷ್ಟೇ ಅಲ್ಲದೇ, ಹೆಚ್ಚುತ್ತಿರುವ ಕಾಮಾಲೆ ಪೀಡಿತರ ಸಂಖ್ಯೆ ಆರೋಗ್ಯ ಇಲಾಖೆ ನಗರಾಡಳಿತ ಹಾಗೂ ತಾಲೂಕಾಡಳಿತದ ನಿದ್ದೆಗೆಡಿಸುವಂತೆ ಮಾಡಿದೆ. ಕೆಲೆವೆಡೆ ಕಾಮಾಲೆ ಪೀಡಿತರ ಅಂಕಿ ಆಶದ ಬಗ್ಗೆ ಜನರು ಗೊಂದಲದಲ್ಲಿದ್ದರೆ, ಮತ್ತೆ ಕೆಲೆವೆಡೆ ಯಾವುದೇ ಸಾವು ಸಂಭವಿಸಿದರೂ ಅದ ಕಾಮಾಲೆಯಿಂದ ಆದ ಸಾವು ಎಂದು ಸುದ್ದಿ ಹರಡುವ ಮೂಲಕ ಇನ್ನೂ ಆತಂಕ ಹೆಚ್ಚಿಸಾಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿಯೇ ಈ ಕಾಮಾಲೆ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹಗಿದ್ದು ಆಡಳಿತ ಈ ಬಗ್ಗೆ ಹೆಚ್ಚಿನ ಮುಂಜಾಗೃತೆ ವಹಿಸಬೇಕಿದೆ.
My God save them,