ಸೀಲ್‌ಡೌನ್‌ ಆದ ದಾಂಡೇಲಿಯ ಇ.ಎಸ್.ಐ. ಆಸ್ಪತ್ರೆ

ಕಾಮಾಲೆ ಚಿಕಿತ್ಸೆಗೆ ಹೋಗಿ ಕೊರೊನಾ ಪತ್ತೆಯಾಯಿತು

ಸೀಲ್‌ಡೌನ್‌ ಆಗಿರುವ ದಾಂಡೇಲಿಯ ಇ.ಎಸ್.ಐ ಆಸ್ಪತ್ರೆ

  ದಾಂಡೇಲಿ: ಇಲ್ಲಿಯ ಬಸವೇಶ್ವರ ನಗರದ ಕೊರೊನಾ ಸೊಂಕಿತ ಮಹಿಳೆಯ ಪತಿ ಕಾರ್ಮಿಕರ ವಿಮಾ ಆಸ್ಪತ್ರೆ (ಇ.ಎಸ್.ಐ) ಯಲ್ಲಿ ಗುಮಾಸ್ತನಾಗಿದ್ದ ಕಾರಣಕ್ಕೆ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ರವಿವಾರ ಬಸವೇಶ್ವರ ನಗರದ ಗರ್ಬಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಕೊರೊನಾ ಸೋಂಕಿತ  25 ವರ್ಷ  ಗರ್ಬಿಣಿಯ ಪತಿ ನಗರದ ಕಾರ್ಮಿಕರ ವಿಮಾ ಆಸ್ಪತ್ರೆ (ಇ.ಎಸ್.ಐ)  ಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದುದರಿಂದ ಇ.ಎಸ್.ಐ. ಆಸ್ಪತ್ರೆಯನ್ನು ರವಿವಾರ ಮದ್ಯಾಹ್ನದಿಂದಲೇ ಸೀಲ್‍ಡೌನ್ ಮಾಡಲಾಗಿದೆ. 

ಕೊರೊನಾ ಸೋಂಕಿತ ಈ ಗರ್ಭಿಣಿ ಹಳದಿ ಕಾಮಾಲೆಗೆ ಒಳಗಾಗಿದ್ದವಳಾಗಿದ್ದಾಳೆ. ಗರ್ಭಿಣಿಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಆಕೆಯ ಪತಿ ಧಾರವಾಡದ ಎಸ್.ಡಿ,.ಎಮ್.ಗೆ ಕರೆದುಕೊಂಡು ಹೀಗಿ ಬಂದಿದ್ಹೋದ. ನಂತರ ಮನೆಯಲ್ಲೇ ಇದ್ದರಾದರೂ ಆತ ತನ್ನ ಕೆಲಸದ ನಿಮಿತ್ತ ಇ.ಎಸ್.ಐ. ಆಸ್ಪತ್ರೆಗೆ  ಹೋಗಿ ಬಂದಿದ್ದಾನೆ. ಸಹ ಸಿಬ್ಬಂದಿಗಳ ಜೊತೆ ವ್ಯವಹರಿಸಿದ್ದಾನೆ. ಜೊತೆಗೆ ನಗರದ ಹೊರಗಡೆಯೂ ಓಡಾಡಿದ್ದಾನೆ. ಸೋಂಕಿತೆಯ ಪತಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರಿಂದ ಇ.ಎಸ್.ಐ. ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಸದ್ಯ ಆಸ್ಪತ್ರೆಗೆ ಯಾರೂ ಹೋಗಿ ಬರುವಂತಿಲ್ಲ ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ.

   ಜೊತೆಗೆ ಬಸವೇಶ್ವರ ನಗರದ ಈ ಮಹಿಳೆ ಚಿಕಿತ್ಸೆ ಮತ್ತು ರಕ್ತ ತಪಾಸಣೇಗೆಂದು  ಸುಭಾಶನಗರದ ಹತ್ತಿರದ ಖಾಸಗಿ ಆಸ್ಪತ್ರೆಯೊಂದಕ್ಕೂ ಹೋಗಿ ಬಂದಿರುವ ಮಾಹಿತಿಯಿದ್ದು, ಈಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬಹುಶಹ ಸೋಮವಾರ ಈ ಖಾಸಗಿ ಆಸ್ಪತ್ರೆಯನ್ನೂ ಸೀಲ್‍ಡೌನ್ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. 

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

2 Comments

  1. It’s due to water pollution. They came to drainage and broke the water pipe. Coz of rain all the dirty water gushed through it. It can be treated at early stage.

Leave a Reply

Your email address will not be published.


*