ತೈಲ ಬೆಲೆ ಏರಿಕೆ ಖಂಡಿಸಿ ದಾಂಡೇಲಿ ಕಾಂಗ್ರೆಸ್ ಪ್ರತಿಭಟನೆ: ರಾಷ್ಟ್ರಪತಿಗಳಿಗೆ ಮನವಿ

ದಾಂಡೇಲಿ:  ಕೊವಿಡ್ 19 ನಂತಹ ಸಂಕಷ್ಠದ ಸಮಯದಲ್ಲಿಯೂ ಕೇಂದ್ರ ಸರಕಾರ ಪೆಟ್ರೋಲ್, ಡೀಸೈಲ್ ಬೆಲೆಯನ್ನು ಹೆಚ್ಚಿಸಿ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ಷೇಪಿಸಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಗರಸಭೆ ಕಾರ್ಯಲಯದೆದುರು ಪ್ರತಿಭಟನೆ ನಡೆಯಿತು.

     ಸರಕಾರದ ತೈಲ ಬೆಲೆ ಏರಿಕೆಯ ನಡೆಯನ್ನು ಖಂಡಿಸಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ವಾಚಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳರವರು ತಹಶೀಲ್ದಾರ ಶೈಲೇಶ ಪರಮಾನಂದರವರಿಗೆ ನೀಡಿದರು. 

  ಈ ಸಂದರ್ಭದಲ್ಲಿ ಮಾತನಾಡಿದ sಸಯ್ಯದ್ ತಂಗಳವರು  ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ  ಇದ್ದ ಪೆಟ್ರೋಲ ದರಕ್ಕೂ ಈಗಿನ ಪೆಟ್ರೋಲ್ ದರಕ್ಕೆ ಬಹಳ ಅಜಗಜಾಂತರವಾಗಿದೆ.  ಕಾಂಗ್ರೆಸ್ ಸರಕಾರದ ಸಂದರ್ಭ ಹಾಗೂ ಈಗಿನ ಭಾಜಪ ಸರಕಾರದದ ತೈಲ ಬೆಲೆಗೆ ಹೋಲಿಸಿದರೆ ಶೇ. 800 ರಷ್ಟು ಹೆಚ್ಚಳವಾಗಿದೆ.  ಇದರಿಂದ ಸರಿ ಸುಮಾರು ಕೇಂದ್ರ ಸರಕಾರಕ್ಕೆ 18 ಲಕ್ಷ ಕೋಟಿ ರೂ ಲಾಭವಾಗಿದೆ.  ಹಿಂದೆ 108 ಡಾಲರ್ ಇದ್ದ ಕಚ್ಚಾ ತೈಲದ ಬೆಲೆ ಇಂದು 41 ರೂ.ಗಳಷ್ಟಾಗಿದೆ. ಅಂದು ಕಚ್ಚಾ ತೈಲದ ಬೆಲೆ ಹೆಚ್ಚಿತ್ತು. ಇಂದು ಗಣನೀಯವಾಗಿ ಕಡಿಮೆಯಾಗಿದೆ. ಶೇ. 60 ರಷ್ಟು ಕಡಿಮೆಯಾಗಿದ್ದರೂ ಇಂಧನ ಬೆಲೆ ಮಾತ್ರ ಹೆಚ್ಚುತ್ತಲೇ ಇದೆ.  ಈ ತೈಲ ಬೆಲೆ ಏರಿಕೆಯಾದರೆ ಕೇವಲ ಪೆಟ್ರೋಲ್ ಡಿಸೈಲ್ ಬಳಸುವವರಿಗೆ ಅಷ್ಟೇ ಸಮಸ್ಯೆಯಾಗುವುದಿಲ್ಲ. ಇದರ ದುಷ್ಪರಿಣಾಮ ಜನರ ಜೀವನದ ಮೇಲಾಗುತ್ತದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗುತ್ತಿದೆ.  ಕಾರಣ ತಕ್ಷಣ ಕೇಂದ್ರ ಸರಕಾರ ಪೆಟ್ರೋಲ್ ಡಿಸೈಲ್ ಬೆಲೆಯನ್ನು ಇಳಕೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. 

   ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಆದಂ ದೇಸೂರ, ಯಾಸ್ಮಿನ್ ಕಿತ್ತೂರ,  ಅಷ್ಪಾಕ ಶೇಖ, ಮಜೀದ ಸನದಿ, ಸಂಜಯ ನಂದ್ಯಾಳಕರ, ಅನಿಲ ನಾಯ್ಕರ, ರುಕ್ಮಿಣಿ ಬಾಗಡೆ, ವೆಂಕಟಮಣಮ್ಮ ಮೈತಕುರಿ, ಶಾಹಿದಾ ಪಠಾಣ, ನೀಲವ್ವ ಬಂಡಿವಡ್ಡರ, ಶಿಲ್ಪಾ ಕೋಡೆ, ಸರಸ್ವತಿ ರಜಪೂತ, ಸಪೂರಾ ಯರಗಟ್ಟಿ, ಮೌಲಾಲಿ ಮುಲ್ಲಾ,  ಪ್ರೀತಿ ನಾಯರ, ಸುಧಾ ರಾಮಲಿಂಗ್ ಜಾಧವ್, ನಗರಸಭೆ ಮಾಜಿ ಆಧ್ಯಕ್ಷ ತಸವರ ಸೌದಾಗರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್. ಹೆಗಡೆ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ  ಆರ್.ಪಿ. ನಾಯ್ಕ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ ಗಿರಿಯಾಳ, ಪ್ರಮುಖರಾದ  ಅವಿನಾಶ ಘೊಡಕೆ, ಮೋಜಿಸ್ ಆರ್.ವಿ.  ವೈ. ಪ್ರಭುದಾಸ,  ಜಾಪರ್ ಮಸನಗಟ್ಟಿ ಮುಂತಾದವರಿದ್ದರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*